Log in
  • ಮುಖಪುಟ
  • ಬ್ರಿಟನ್ನಿನಲ್ಲಿ ಅಧ್ಯಯನ, ದೇಶದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕರುನಾಡಿಗರಿಗೆ 2ನೇ ಸ್ಥಾನ

ಬ್ರಿಟನ್ನಿನಲ್ಲಿ ಅಧ್ಯಯನ, ದೇಶದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಕರುನಾಡಿಗರಿಗೆ 2ನೇ ಸ್ಥಾನ

ಕರ್ನಾಟಕವು ಸಹ ಜಾಗತಿಕವಾಗಿ ತೆರೆದುಕೊಂಡಿದ್ದು, ವಿದೇಶದಲ್ಲಿ ಅಧ್ಯಯನ ಮಾಡುವವರಲ್ಲಿ ನಮ್ಮ ರಾಜ್ಯದವರ ಸಂಖ್ಯೆ ಜಾಸ್ತಿ ಇದೆ. ಇದಕ್ಕೆ ನಿದರ್ಶನ ಎಂಬಂತೆ ಯೂನಿವರ್ಸಿಟೀಸ್ ಯುಕೆ ಇಂಟರ್ ನ್ಯಾಷನಲ್ ಹಾಗೂ ಐ ಗ್ರ್ಯಾಜುಯೇಟ್ ಸಂಸ್ಥೆ ಸಮೀಕ್ಷೆ ವರದಿ ಬಿಡುಗಡೆ ಮಾಡಿದ್ದು, ಬ್ರಿಟನ್ನಲ್ಲಿ ಪದವಿ ಮುಗಿಸಿದ ಭಾರತೀಯರಲ್ಲಿ ಕರ್ನಾಟಕ ಎರಡನೇ ಸ್ಥಾನ ಪಡೆದಿದೆ ಎಂದು ತಿಳಿದುಬಂದಿದೆ.

ಬ್ರಿಟನ್ನಿಂದ ಪದವಿ ಪಡೆದವರಲ್ಲಿ ಮಹಾರಾಷ್ಟ್ರದವರು ಶೇ.25ರಷ್ಟು ಇದ್ದರೆ, ಕರ್ನಾಟಕದವರು ಶೇ.15.4ರಷ್ಟಿದ್ದಾರೆ. ದಿಲ್ಲಿ ವಿದ್ಯಾರ್ಥಿಗಳು ಶೇ.14, ತೆಲಂಗಾಣ ಶೇ.10.7, ತಮಿಳುನಾಡು ಶೇ.6.7, ಕೇರಳ ಶೇ.4.5, ಗುಜರಾತ್ನ ಶೇ.3.1ರಷ್ಟು ವಿದ್ಯಾರ್ಥಿಗಳು ಬ್ರಿಟನ್ನ ಪ್ರತಿಷ್ಠಿತ ವಿವಿಗಳಲ್ಲಿ ಅಧ್ಯಯನ ಮಾಡಿ, ಪದವಿ ಪಡೆದುಕೊಂಡಿದ್ದಾರೆ ಎಂದು ಸಮೀಕ್ಷೆ ಬಹಿರಂಗಗೊಳಿಸಿದೆ.

ಹೀಗೆ ಬ್ರಿಟನ್ನಲ್ಲಿ ಪದವಿ ಪಡೆದವರು ಭಾರತದಲ್ಲಿ ಸೇವೆ ಸಲ್ಲಿಸುವ ಇಚ್ಛೆ ಹೊಂದಿದ್ದು, ಶೇ.62ರಷ್ಟು ವಿದ್ಯಾರ್ಥಿಗಳು ಕೆಲಸ ಅರಸಿ ಭಾರತಕ್ಕೆ ಬಂದಿದ್ದಾರೆ ಎಂದು ವರದಿಯಲ್ಲಿ ಬಹಿರಂಗವಾಗಿರುವುದು ದೇಶದ ಹಿತದೃಷ್ಟಿಯಿಂದ ಉತ್ತಮ ಬೆಳವಣಿಗೆಯಾಗಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management