ದೇಶದಲ್ಲಿ ಫ್ಲಿಪ್ ಕಾರ್ಟ್ ನೂತನ ಯೋಜನೆ, 27 ಕಿರಾಣಾ ಸ್ಟೋರ್ಸ್ ತೆರೆಯುವ ಘೋಷಣೆ
![]()
ಭಾರತೀಯ ಆನ್ ಲೈನ್ ಮಾರಾಟ ಮಳಿಗೆಗಳಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಫ್ಲಿಪ್ ಕಾರ್ಟ್ ಸಂಸ್ಥೆಯು ದೇಶದ 700 ನಗರಗಳಲ್ಲಿ 27 ಸಾವಿರ ಕಿರಾಣಾ ಅಂಗಡಿಗಳನ್ನು ತೆರೆಯುವುದಾಗಿ ಘೋಷಿಸಿದೆ. ಆ ಮೂಲಕ ದೇಶದಲ್ಲಿ ವ್ಯಾಪಾರ ವೃದ್ಧಿಗೆ ಮತ್ತೊಂದು ಹೆಜ್ಜೆ ಇಟ್ಟಿದೆ. ದೇಶದ ಸಣ್ಣ ಹಾಗೂ ಮಧ್ಯಮ ಶ್ರೇಣಿಯ ನಗರಗಳಲ್ಲಿ ಶಾಪಿಂಗ್ ಮಾಲ್ ಇರುವುದಿಲ್ಲ ಹಾಗೂ ಕಿರಾಣಾ ಅಂಗಡಿಗಳೇ ಜನರು ದಿನಸಿ ಖರೀದಿಗೆ ಆಧಾರವಾಗಿರುತ್ತವೆ. ಈ ದಿಸೆಯಲ್ಲಿ ದೇಶಾದ್ಯಂತ ಕಿರಾಣಾ ಅಂಗಡಿಗಳನ್ನು ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದು ಫ್ಲಿಪ್ ಕಾರ್ಟ್ ತಿಳಿಸಿದೆ. ಅಷ್ಟೇ ಅಲ್ಲ, 2 ಟೈರ್ ಹಾಗೂ 3 ಟೈರ್ ಶ್ರೇಣಿಯ ನಗರಗಳಲ್ಲೂ ಕಿರಾಣಾ ಅಂಗಡಿಗಳನ್ನು ಸ್ಥಾಪಿಸಲಾಗುವುದು. ಚಿಲ್ಲರೆ ಮಾರುಕಟ್ಟೆಯಲ್ಲಿ ಕಿರಾಣಾ ಅಂಗಡಿಗಳು ಪ್ರಾಬಲ್ಯ ಸಾಧಿಸಿದ್ದು, ಇದನ್ನು ಮನಗಂಡು ಭಾರತದಾದ್ಯಂತ ಈ ಮಳಿಗೆಗಳನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದೆ. ಆದಾಗ್ಯೂ, ದಿನಸಿ ವಸ್ತುಗಳನ್ನು ಸಹ ಕಿರಾಣಾ ಅಂಗಡಿಗಳ ಮೂಲಕ ಜನರ ಮನೆಬಾಗಿಲಿಗೆ ತಲುಪಿಸುವ ಕುರಿತು ಚಿಂತನೆ ನಡೆದಿದೆ ಎಂದು ಫ್ಲಿಪ್ ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಮಾಹಿತಿ ನೀಡಿದ್ದಾರೆ.
|