ಮೋದಿ ಅವರನ್ನು ಟೀಕಿಸಲು ಪಾಕಿಸ್ತಾನದ ಫೋಟೋ ಬಳಸಿ ಕಾಂಗ್ರೆಸ್ ಕೀಳು ರಾಜಕಾರಣ
ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ, ಬಿಜೆಪಿಯ ಮುಖ್ಯಮಂತ್ರಿಗಳನ್ನು ಟೀಕಿಸಲು ಕಾಂಗ್ರೆಸ್ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತದೆ ಎಂಬುದು ಹಲವು ಬಾರಿ ದೃಢವಾಗಿದೆ. ಈಗ ಇಂತಹುದೇ ಉಪಟಳವನ್ನು ಕಾಂಗ್ರೆಸ್ ಮಾಡಿದ್ದು, ಮೋದಿ ಹಾಗೂ ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಅವರನ್ನು ಟೀಕಿಸಲು ಪಾಕಿಸ್ತಾನದ ಫೋಟೋಗಳನ್ನು ಬಳಸುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡಿದೆ. ಕಾಂಗ್ರೆಸ್ಸಿನ ಭಾರತೀಯ ಯುವ ಕಾಂಗ್ರೆಸ್ ಘಟಕವು, ಮೋದಿ ಹಾಗೂ ಖಟ್ಟರ್ ಅವರನ್ನು ಟೀಕಿಸಿದೆ. ನರೇಂದ್ರ ಮೋದಿ ಹಾಗೂ ಖಟ್ಟರ್ ಅವರು ಹರ್ಯಾಣದಲ್ಲಿ 647 ಉದ್ಯೋಗ ಸೃಷ್ಟಿಸಿದ್ದಾರೆ ಎಂದು ದೂರಿದೆ. ಆದರೆ, ಹೀಗೆ ದೂರಲು ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ವಿರುದ್ಧ ಹೋರಾಡಿದವರ ಫೋಟೋವನ್ನು ಬಳಸುವ ಮೂಲಕ ಕಾಂಗ್ರೆಸ್ ಪಾಕಿಸ್ತಾನ ಪ್ರೇಮ ವ್ಯಕ್ತಪಡಿಸಿದೆ. ಇದನ್ನು ಮನಗಂಡ ಹರ್ಯಾಣ ಬಿಜೆಪಿ ಘಟಕವು ಕಾಂಗ್ರೆಸ್ಸಿನ ಬಣ್ಣ ಬಯಲು ಮಾಡಿದೆ. ಅಲ್ಲದೆ, ಕಾಂಗ್ರೆಸ್ಸಿನ ಇಂತಹ ಕೀಳುಮಟ್ಟದ ರಾಜಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆಗಳು ವ್ಯಕ್ತವಾಗಿವೆ.
|