ಭಾರತ ಚಂದ್ರನನ್ನು ತಲುಪಿದೆ, ಪಾಕ್ ಕತ್ತೆ ರಪ್ತು ಮಾಡುತ್ತಿದೆ: ಗಿರಿರಾಜ್ ಸಿಂಗ್
ಚಂದ್ರಯಾನ- 2 ವಿಕ್ರಮ ಕೊನೆ ಕ್ಷಣದಲ್ಲಿ ನಿಗದಿಯಂತೆ ಲ್ಯಾಂಡ್ ಆಗಲಿಲ್ಲ. ಇಡೀ ಭಾರತೀಯ ಸಮುದಾಯವೇ ನಿರೀಕ್ಷೆಯಿಂದ ವಿಕ್ರಮ್ ಮಾಹಿತಿಗಾಗಿ ಕಾಯುತ್ತಿದೆ. ಪಾಪಿ ಪಾಕಿಸ್ತಾನ ಮಾತ್ರ ಚಂದ್ರಯಾನ- 2 ವಿಫಲ ಎಂದು ಸಂಭ್ರಮಿಸಿತ್ತು. ಪಾಕಿಸ್ತಾನದ ಈ ನಡೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಚಂದ್ರಯಾನ - 2 ದಲ್ಲಿ ಕೊಂಚ ಏರುಪೇರು ಆಗಿರಬಹುದು. ಆದರೆ ನಾವು ಈಗಾಗಲೇ ಚಂದ್ರನನ್ನು ತಲುಪಿದ್ದೇವೆ, ಪಾಕಿಸ್ತಾನ ಮಾತ್ರ ಇನ್ನೂ ಕತ್ತೆಗಳ ರಪ್ತು ಮಾಡುವುದರಲ್ಲೇ ಇದೆ ಎಂದು ಗುಡುಗಿದ್ದಾರೆ. ಭಾರತದ ಚಂದ್ರಯಾನ- 2 ಬಗ್ಗೆ ಪಾಕಿಸ್ತಾನ ಚಿಂತಿಸುವುದನ್ನು ಬಿಟ್ಟು ಮೊದಲು ದೇಶದ ಆರ್ಥಿಕತೆ ಬಗ್ಗೆ ಯೋಚಿಸುವುದನ್ನು ಕಲಿಯಲಿ ಎಂದು ವಾಗ್ದಾಳಿ ನಡೆಸಿದ್ದಾರೆ. ನಾವಿಬ್ಬರೂ ಒಟ್ಟಿಗೆ ಸ್ವಾತಂತ್ರ್ಯ ಪಡೆದಿದ್ದೇವೆ, ಆದರೆ ಪಾಕಿಸ್ತಾನ ಸದ್ಯದ ಪರಿಸ್ಥಿತಿ ಹೇಗಿದೆ. ಭಾರತ ವಿಶ್ವದಲ್ಲೇ ಅತಿವೇಗವಾಗಿ ಅಭಿವೃದ್ಧಿಯನ್ನು ಹೊಂದುತ್ತಿದೆ. ಭಾರತೀಯರು ಈಗಾಗಲೇ ಚಂದ್ರನನ್ನು ತಲುಪಿದ್ದಾರೆ. ಪಾಕಿಸ್ತಾನ ಮಾತ್ರ ಇನ್ನೂ ಕತ್ತೆ ವ್ಯಾಪಾರದಲ್ಲೇ ಇದೆ ಎಂದು ಟೀಕಿಸಿದ್ದಾರೆ. 370 ವಿಧಿ ರದ್ದು ವಿಚಾರವನ್ನು ಸುಖಾಸುಮ್ಮನೇ ಪಾಕಿಸ್ತಾನ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕೊಂಡೊಯ್ದು ಖಾಲಿ ಕೈಯಲ್ಲಿ ವಾಪಸ್ಸಾಗಿದೆ. ಇಷ್ಟಾದರೂ ಬುದ್ಧಿ ಕಲಿಯದ ಪಾಕಿಸ್ತಾನ ಗಡಿಯಲ್ಲಿ ನಿತ್ಯ ಅಪ್ರಚೋದಿತ ದಾಳಿ ನಡೆಸುತ್ತಲೇ ಇದೆ. ಗಡಿಯಲ್ಲಿ ಪಾಕ್ ಸೇನೆ ಹೀಗೆ ಉದ್ಧಟತನ ಮುಂದುವರಿಸಿದರೆ, ಮುಂದಿನ ದಿನಗಳಲ್ಲಿ ಭಾರತೀಯ ಸೇನೆ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. |