ಮತ್ತೆ ಪಾಕ್ ಸೇನೆ ಉದ್ಧಟತನ: ಗಡಿಯಲ್ಲಿ ಅಪ್ರಚೋದಿತ ದಾಳಿ ನಡೆಸಿ ಪುಂಡಾಟ
ಜಮ್ಮು- ಕಾಶ್ಮೀರದಲ್ಲಿನ 370 ವಿಧಿ ರದ್ದಿನಿಂದಿನಿಂದಾಗಿ ಕೆಂಡಾಮಂಡಲ ಆಗಿರುವ ಪಾಕ್, ಗಡಿಯಲ್ಲಿ ನಿತ್ಯ ಪುಂಡಾಟ ಮೆರೆಯುತ್ತಲೇ ಇದೆ. ಗಡಿಯಲ್ಲಿ ಭಾರತೀಯ ನಾಗರೀಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ಅಪ್ರಚೋದಿತ ದಾಳಿ ನಡೆಸುತ್ತಲೇ ಇದೆ. ರಜೌರಿ ಜಿಲ್ಲೆಯ ನೌಶೆರಾ ಸೆಕ್ಟರ್ನಲ್ಲಿ ಭಾನುವಾರ ಸಂಜೆ ವೇಳೆಗೆ ಏಕಾಏಕಿ ಗಡಿಯಲ್ಲಿ ಸೆಲ್ ದಾಳಿ ನಡೆಸಿದೆ. ಭಾರತೀಯ ನಾಗರೀಕರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ದಾಳಿ ನಡೆಸುತ್ತಲೇ ಇದೆ. ಪಾಕ್ ಉದ್ದೇಶ ಗಡಿಯಲ್ಲಿ ಜನರಲ್ಲಿ ಆತಂಕ ಮೂಡಿಸುವುದಾಗಿದೆ. ಗಡಿಯಲ್ಲಿನ ಪಾಕ್ ಪುಂಡಾಟದಿಂದಾಗಿ ಜನರು ಭಯಭೀತರಾಗಿದ್ದು, ಊರು ಬೀಡುತ್ತಿದ್ದಾರೆ. ಇಂದಿನ ದಾಳಿಯಲ್ಲೂ ಹಲವು ಮನೆಗಳಿಗೆ ಹಾನಿಯಾಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಯಾವ ಸಮಯದಲ್ಲಿ ಏನಾಗುತ್ತೋ ಎಂದು ಜನರು ಗಾಬರಿಯಿಂದ ಊರು ತೊರೆಯುತ್ತಿದ್ದಾರೆ. ಕೆಲವರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಪಾಕಿಸ್ತಾನ ಗುಂಡಿನ ದಾಳಿಗೆ ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರವನ್ನೇ ಕೊಟ್ಟಿದೆ. ಪಾಕ್ ಗಡಿಯೊಳಗೆ ನುಗ್ಗಿ ಸೇನೆ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಬಂದೂಕು ಮಾತಾಡುತ್ತಿದ್ದಂತೆಯೇ ಗಡಿಯಲ್ಲಿನ ಪಾಕ್ ಸೈನಿಕರು ರಣಹೇಡಿಗಳಂತೆ ಓಡಿ ಹೋಗಿದ್ದಾರೆ. ಶನಿವಾರ ಕೂಡ ಗಡಿಯಲ್ಲಿ ಪಾಕ್ ಮೂಲದ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಓರ್ವ ಹೆಣ್ಣು ಮಗು ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದರು. |