Log in
  • ಮುಖಪುಟ
  • ನಿಯಮ ಪಾಲಿಸದ ಟ್ರಕ್ ಡ್ರೈವರ್ ಗೆ 86 ಸಾವಿರ ರೂ. ದಂಡ, ಇದು ದೇಶದಲ್ಲೇ ಬೃಹತ್ ಮೊತ್ತ

ನಿಯಮ ಪಾಲಿಸದ ಟ್ರಕ್ ಡ್ರೈವರ್ ಗೆ 86 ಸಾವಿರ ರೂ. ದಂಡ, ಇದು ದೇಶದಲ್ಲೇ ಬೃಹತ್ ಮೊತ್ತ

ರೂಲ್ಸ್ ಇರೋದೇ ಬ್ರೇಕ್ ಮಾಡುವುದಕ್ಕೆ ಎಂದು ಇನ್ನು ಮುಂದೆ ಹೇಳುವಂತಿಲ್ಲ ಎಂಬ ಪರಿಸ್ಥಿತಿಯನ್ನು ನರೇಂದ್ರ ಮೋದಿ ಸರ್ಕಾರವು ತಂದಿದ್ದು, ಸಂಚಾರ ನಿಯಮ ಪಾಲಿಸದವರಿಗೆ ಭಾರಿ ದಂಡ ವಿಧಿಸಲಾಗುತ್ತದೆ. ಆ ಮೂಲಕ ಸಂಚಾರ ನಿಯಮ ಉಲ್ಲಂಘಿಸಿ,ಯಡ್ಡಾದಿಡ್ಡಿ ವಾಹನ ಓಡಿಸಿ ತಮ್ಮ ಹಾಗೂ ಸಾರ್ವಜನಿಕರ ಪ್ರಾಣಕ್ಕೆ ಕುತ್ತು ತರುವವರಿಗೆ ತಕ್ಕ ಪಾಠ ಕಲಿಸಲಾಗುತ್ತದೆ.

ಅದರಲ್ಲೂ ಒಡಿಶಾದ ಸಂಬಾಲ್ಪುರ ಜಿಲ್ಲೆಯಲ್ಲಿ ಟ್ರಕ್ ಡ್ರೈವರ್ ಒಬ್ಬ ಹಲವು ನಿಯಮ ಉಲ್ಲಂಘಿಸಿದ್ದು ಪೊಲೀಸರು ಬರೋಬ್ಬರಿ 86,500 ರೂಪಾಯಿ ದಂಡ ವಿಧಿಸಿದ್ದಾರೆ. ಇದು ದೇಶದಲ್ಲೇ ಹೆಚ್ಚು ಮೊತ್ತದ ದಂಡವಾಗಿದ್ದು, ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಡ್ರೈವರ್ 70 ಸಾವಿರ ರೂಪಾಯಿ ಪಾವತಿಸಿದ್ದಾನೆ.

ಟ್ರಕ್ ಡ್ರೈವರ್ ನನ್ನು ಅಶೋಕ್ ಜಾಧವ್ ಎಂದು ಗುರುತಿಸಲಾಗಿದ್ದು, ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ವಯ ಅನಧಿಕೃತ ಚಾಲಕನಿಗೆ ಟ್ರಕ್ ನೀಡಿದ್ದಕ್ಕೆ 5 ಸಾವಿರ ರೂಪಾಯಿ, ಚಾಲನಾ ಪರವಾನಗಿ ಇಲ್ಲದ್ದಕ್ಕೆ 5 ಸಾವಿರ ರೂ., ನಿಗದಿತ ತೂಕಕ್ಕಿಂತ ಹೆಚ್ಚು ತೂಕವನ್ನು ಹೇರಿದ್ದಕ್ಕೆ 56 ಸಾವಿರ ರೂಪಾಯಿ ಸೇರಿ 86,500 ರೂಪಾಯಿ ದಂಡ ವಿಧಿಸಲಾಗಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management