ಪಾಕಿಸ್ತಾನದಲ್ಲಿ ಬಲವಂತದ ಮತಾಂತರ, ಬಾಲಕಿಯ ಇಸ್ಲಾಂಗೆ ಮತಾಂತರಗೊಳಿಸಿದ ಪ್ರಾಂಶುಪಾಲೆ
ಪಾಕಿಸ್ತಾನದಲ್ಲಿ ಎಲ್ಲ ಸಮಸ್ಯೆಗಳಿಗೆ ಇಸ್ಲಾಮೇ ಕಾರಣ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ. ಇಸ್ಲಾಂ ಮೂಲಭೂತವಾದ, ಇಸ್ಲಾಮಿಕ್ ಉಗ್ರರು, ಇಸ್ಲಾಂನ ಶಿಯಾ ಮತ್ತು ಸುನ್ನಿ ಪಂಗಡಗಳ ನಡುವಿನ ಕದನ, ಮತಾಂತರ ಸೇರಿ ಹಲವು ಕಾರಣಗಳಿಂದಾಗಿ ರಾಜ್ಯವು ಅರಾಜಕತೆಗೆ ಕುಸಿದಿದೆ. ಇದಕ್ಕೆ ಈಗ ಇಸ್ಲಾಮಿಕ್ ಬಲವಂತದ ಮತಾಂತರವೂ ಸೇರಿದೆ. ಇತ್ತೀಚೆಗಷ್ಟೇ ಹಿಂದೂ ಯುವತಿಯನ್ನು ಅಪಹರಿಸಿ ಇಸ್ಲಾಮಿಗೆ ಮತಾಂತರ ಪ್ರಕರಣ ಸುದ್ದಿಯಾದ ಬೆನ್ನಲ್ಲೇ ಈಗ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಬಲವಂತದ ಮತಾಂತರ ನಡೆದಿದ್ದು, ಶಾಲೆಯ ಪ್ರಾಂಶುಪಾಲೆಯೇ ಕ್ರಿಶ್ಚಿಯನ್ ಬಾಲಕಿಯನ್ನು ಅಪಹರಣ ಮಾಡಿ ಇಸ್ಲಾಮಿಗೆ ಮತಾಂತರ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಪಂಜಾಬ್ ಪ್ರಾಂತ್ಯದಲ್ಲಿ ಘಟನೆ ನಡೆದಿದ್ದು, ಫೈಜಾ ಎಂಬ 15 ವರ್ಷದ ಬಾಲಕಿಯನ್ನು ಪ್ರಾಂಶುಪಾಲೆ ಸಲೀಮಾ ಬೀಬಿಯು ಲಾಹೋರಿನಿಂದ 50 ಕಿಲೋಮೀಟರ್ ದೂರದಲ್ಲಿರುವ ಸ್ಕೇಖುಪುರ ಪ್ರದೇಶಕ್ಕೆ ತೆರಳಿ ಬಲವಂತವಾಗಿ ಮತಾಂತರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಬಾಲಕಿಯ ತಂದೆ ಮುಖ್ತಾರ್ ಮೈಶ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
|