ವಿಷ್ಣು ಸಹಸ್ರನಾಮವೇ ಯಾಕೆ....? ವಿಜಯ್ ಕುಮಾರ್ ಹೆಚ್.ಕೆ.
ಪಾರಾಯಣ ಎಂದರೆ ವಿಷ್ಣುಸಹಸ್ರನಾಮ ಪಾರಾಯಣ ಮಾಡುವವರು ಅದರಲ್ಲೇ ಪರಾಯಣರಾಗಿ ಪಾರಾಯಣ ಮಾಡಬೇಕು. ಪರಾಯಣ ಎಂದರೆ ಪರಮಾತ್ಮನಲ್ಲಿ ಮುಳುಗಿರಬೇಕು. ಅವನೇ ಮತಿ, ಅವನೇ ಗತಿ, ಪರಮಾನಂದ ಸ್ಥಿತಿ ಎಂಬ ಅನುಭವ ಬರಬೇಕು. ಸಾಮೂಹಿಕ ಪಾರಾಯಣ ಆಗುವಾಗ ಸಹಸ್ರನಾಮದಲ್ಲಿನ ನಾಮಮಂತ್ರ ತರಂಗಗಳು ಸುತ್ತಲಿನ ವಾತಾವರಣವನ್ನು ಶುದ್ಧಿಗೊಳಿಸುತ್ತ ಹೃದಯದಲ್ಲಿ ದೈವೀಕ ಆನಂದದ ಅನುಭವ ತರುತ್ತವೆ. ಮನಸ್ಸಿಗೆ ಶಾಂತಿ, ನೆಮ್ಮದಿ, ಆನಂದ ದೊರಕುತ್ತದೆ. ಹಬ್ಬ, ವ್ರತ, ಉತ್ಸವಗಳಲ್ಲಿ ವಿಶೇಷವಾಗಿ ಪಾರಾಯಣ ಮಾಡಲಾಗುತ್ತದೆ. ಭೀಷ್ಮ ಏಕಾದಶಿ, ವೈಕುಂಠ ಏಕಾದಶಿ, ಪ್ರಥಮ ಏಕಾದಶಿ ದಿನಗಳು ಪಾರಾಯಣಕ್ಕೆ ಪ್ರಶಸ್ತವಾದ ದಿನಗಳು. ಪಾರಾಯಣ ಮಾಡುವಾಗ ಪೂರ್ವ ಅಥವಾ ಉತ್ತರಾಭಿಮುಖವಾಗಿ ಮಾಡಬೇಕು. ಸಾಮೂಹಿಕ ಅಥವಾ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಪಾರಾಯಣ ಮಾಡಿದರೆ ಹೆಚ್ಚಿನ ಅನುಗ್ರಹವಿರುತ್ತದೆ. ಆತ್ಮಸುಖ, ಯೋಗಕ್ಷೇಮ, ಭಾಗ್ಯ-ಸೌಭಾಗ್ಯ, ಧೈರ್ಯ, ಆತ್ಮಸ್ಥೈರ್ಯ, ಸ್ಮರಣಶಕ್ತಿ, ಸ್ಪುರಣಶಕ್ತಿ, ಮೈಧಾಶಕ್ತಿ ಹಾಗೂ ಕೀರ್ತಿಗಳನ್ನು ತಂದುಕೊಡುತ್ತದೆ. ಶನಿಕಾಟ-ವಿಷ್ಣುಸಹಸ್ರನಾಮದವರಿಗೆ ಇರುವುದಿಲ್ಲ. ಎಲ್ಲಾ ತಾಪತ್ರಯ ಪರಿಹಾರಕ, ಇಷ್ಟಪ್ರದ, ಅನಿಷ್ಟ ನಿವಾರಕ ಪವಿತ್ರ ಸಹಸ್ರನಾಮವೆಂದೇ ಇದು ವಿಶಿಷ್ಟವಾಗಿದೆ. ಸ್ವರ ತರಂಗಗಳ ಪ್ರಭಾವ ಸಕಲ ಪುರುಷಾರ್ಥ ಸಿದ್ಧಿ ಶರಪಂಜರದ ಮೇಲೆ ಮಲಗಿದ್ದ ಭೀಷ್ಮರನ್ನು ಧರ್ಮರಾಜ ಕೇಳುತ್ತಾನೆ, ಇಡೀ ಜಗತ್ತಿನ ದೈವ ಯಾವುದು? ಬೃಹತೀಸಹಸ್ರ ಶಾಸ್ತ್ರಗ್ರಂಥವು ಋಗ್ವೇದದ ಒಂದು ಸಾವಿರ ಋಕ್ಗಳ ಒಂದು ಸುಂದರಹಾರ. ಬೃಹತೀ ಛಂದಸ್ಸಿನಲ್ಲಿ ಪ್ರತಿಸ್ತೋತ್ರದಲ್ಲಿಯೂ ಮೂವತ್ತಾರು ಸ್ವರಾಕ್ಷರ ಹಾಗೂ ಮೂವತ್ತಾರು ವ್ಯಂಜನಾಕ್ಷರ ಇರುತ್ತದೆ. ಎಂದರೆ ಪ್ರತಿಸ್ತೋತ್ರದಲ್ಲಿ 72 ಅಕ್ಷರಗಳು. ಒಂದುಸಾವಿರ ಸ್ತೋತ್ರಗಳಲ್ಲಿ 72 ಸಾವಿರ ಅಕ್ಷರಗಳು. ಬೃಹತೀ ಸಹಸ್ರದ ವ್ಯಾಖ್ಯೆಯವೇ ವಿಷ್ಣುಸಹಸ್ರನಾಮ ಸ್ತೋತ್ರ. ವಿಷ್ಣುಸಹಸ್ರನಾಮ 72 ಸಾವಿರ ನಾಡಿಗಳನ್ನು ಸಂಸ್ಕಾರಮಾಡಿ ನಾಡೀಶುದ್ಧಿ, ದೇಹಶುದ್ಧಿ, ಮನಶುದ್ಧಿ ಮಾಡುತ್ತದೆ. ಸಂವಿಧಾನ ಈ ಮಹಾಮಂತ್ರದ ದೈವ ಮಹಾವಿಷ್ಣು, ಇದನ್ನು ನೀಡಿದ ಋಷಿ ವೇದವ್ಯಾಸರು, ಇದರ ಛಂದಸ್ಸು ಅನುಷ್ಟುಪ್, ಈ ಮಂತ್ರದ ಬೀಜಭಾಗ ಅಮೃತಾಂಶೂದ್ಭವೋ ಭಾನುಃ ಸ್ತ್ರೋತ್ರ, ಈ ಮಂತ್ರದ ಮಹಾಶಕ್ತಿ ದೇವಕೀನಂದನಃ ಸ್ರಷ್ಟಾ ಸ್ತ್ರೋತ್ರ. ಇದರ ಪರಮಮಂತ್ರ ಉದ್ಭವಃ ಕ್ಷೋಭಣೋ ದೇವಃ ಸ್ತೋತ್ರ, ಈ ಮಂತ್ರದ ಅನಾವರಣ ಭಾಗ ಶಂಖಭೃತ್ ನಂದಕೀ ಚಕ್ರೀ ಸ್ತೋತ್ರ. ಈ ಮಂತ್ರದ ಅಸ್ತ್ರಭಾಗ ಶಾಂಗಧನ್ವಾ ಗದಾಧರಃ ಸ್ತೋತ್ರ, ಈ ಮಂತ್ರದ ಜಾಗೃತಿಭಾಗ ರಥಾಂಗಪಾಣಿಃ ಅಕ್ಷೋಭ್ಯ ಇದರ ಕವಚಭಾಗ ತ್ರಿಸಾಮಾಸಾಮಗಸಾಮ. ಇಡೀ ಮಂತ್ರದ ಮೂಲಪ್ರೇರಣೆ ಆನಂದಂ ಪರಬ್ರಹ್ಮ. ಈ ಮಂತ್ರದ ಪಹರೆ ಋತುಃ ಸುದರ್ಶನಃ ಕಾಲ ಸ್ತೋತ್ರ. ವಿಷ್ಣುವೇ ಜಗದೊಡೆಯ ಎಂಬುವುದೇ ಧ್ಯಾನ. ಇದರ ಪಠಣ, ಜಪ, ಪಾರಾಯಣವು ವಿಷ್ಣು ಪ್ರೇರಣೆಯಿಂದಾಗಿದ್ದು, ಅದರಿಂದ ವಿಷ್ಣು ಪ್ರೀತನಾಗಲಿ, ಎಂಬ ಭಾವನೆಯೇ ಇದರ ಪ್ರಯೋಜನ. ಜಪಗಳಲ್ಲಿ ಸರ್ವಶ್ರೇಷ್ಠ ವಿಷ್ಣುಸಹಸ್ರನಾಮದಲ್ಲಿ ಧರ್ಮರಾಜ ಕಿಂ ಜಪನ್ ಮುಚ್ಯತೇ ಜಂತುಃ ಜನ್ಮ ಸಂಸಾರಬಂಧನಾತ್’ ಎಂದು ಕೇಳಿದ ಪ್ರಶ್ನೆಗೆ ಜಪಗಳಲ್ಲಿ ವಿಷ್ಣುಸಹಸ್ರನಾಮ ಜಪಶ್ರೇಷ್ಠ ಎಂದು ಭೀಷ್ಮರು ಉತ್ತರಿಸಿದ್ದಾರೆ. ವಿಷ್ಣುಸಹಸ್ರನಾಮ ಪಾರಾಯಣ ಮಾಡುವಾಗ ನಾಮಮಂತ್ರ ತರಂಗಗಳು ಪರಿಸರ ಶುದ್ಧಿಮಾಡಿ, ಅಪೂರ್ವ ಸನ್ನಿಧಾನ ನಿರ್ಮಾಣ ಮಾಡುತ್ತವೆ. ಹನ್ನೊಂದರ ಮಹತ್ವ ಧರ್ಮ, ಭಕ್ತಿ, ಜ್ಞಾನ, ಪ್ರಜ್ಞೆ, ಮೈಧಾಶಕ್ತಿ, ಧೃತಿ, ಸ್ಥಿತಿ, ಬಲ, ಶ್ರವಣ, ಮನನ, ಶೀಲ, ವಿನಯ, ವಿದ್ಯೆ, ನೆಮ್ಮದಿ, ಮನಶ್ಶಾಂತಿ ಇವಿಷ್ಟು ವಿಷ್ಣುಸಹಸ್ರನಾಮದ ಚಕ್ರದಿಂದ ಎಂದರೆ ಹನ್ನೊಂದು ದಿನ ಪ್ರತಿದಿನ 11 ಬಾರಿ ಪಾರಾಯಣ ಮಾಡುವುದರಿಂದ ಲಭ್ಯವಾಗುತ್ತವೆ. ಹನ್ನೊಂದು ಚಕ್ರ ಮುಗಿಸಿದವರಿಗೆ ಪುನರ್ಜನ್ಮ ಇಲ್ಲ. ವಿಷ್ಣುಸಹಸ್ರನಾಮ ಇದು, ಪವಿತ್ರಕ್ಕೆ ಪವಿತ್ರ, ಮಂಗಳಕ್ಕೆ ಮಂಗಳ, ಇದನ್ನು ಪಾರಾಯಣ ಮಾಡುವವರ ಮನೆ, ಮನ ಪಾವನವಾಗುತ್ತದೆ. ವಿಷ್ಣು ಸಹಸ್ರನಾಮ ಚಕ್ರ ಯಾರು ವಿಷ್ಣುಸಹಸ್ರನಾಮ ಹೇಳುವರೋ, ಕೇಳುವರೋ ಅಂತಹವರಿಗೆ ಇಹದಲ್ಲಿ, ಪರದಲ್ಲಿ ಎಂದಿಗೂ ಅಶುಭ, ಅಮಂಗಳವೆನ್ನುವುದೇ ಇಲ್ಲ. ಇದರ ಪಾರಾಯಣದಿಂದ ಯಶಸ್ಸು, ಶ್ರೈಯಸ್ಸು, ಲಭ್ಯ. ಎಲ್ಲಾ ತಾಪತ್ರಯ, ಭಯಗಳೂ ನಿವಾರಣೆಯಾಗುತ್ತವೆ. ಆರೋಗ್ಯ, ಕಾಂತಿ, ಬಲ, ಸೌಂದರ್ಯ, ಹೆಚ್ಚುತ್ತದೆ. ಅಂತಃಕರಣ ಶುದ್ಧವಾಗುತ್ತದೆ. ಶ್ರದ್ಧೆ-ಭಕ್ತಿಯಿಂದ ವಿಷ್ಣು ಸಹಸ್ರನಾಮಚಕ್ರ ಪೂರೈಸಿದವರು ಸುಖ, ಕ್ಷಮೆ, ಸಂಪತ್ತು, ಧೈರ್ಯ, ಸ್ಮೃತಿ, ಕೀರ್ತಿಗಳನ್ನು ಹೊಂದುತ್ತಾರೆ. ಶೀಘ್ರದಲ್ಲಿ ಎಲ್ಲ ನೋವು, ಸಂಕಟಗಳಿಂದ ಪಾರಾಗುತ್ತಾರೆ. ಶಾಂತಿ, ಸಮಾಧಾನ, ಧ್ಯಾನ, ನೆಮ್ಮದಿ, ದಯೆ, ತ್ಯಾಗ ಪ್ರೇಮ ಅವರಿಗೆ ಲಭಿಸುತ್ತವೆ. ವಿಷ್ಣುಸಹಸ್ರನಾಮ ಸರ್ವಶಾಸ್ತ್ರಗಳ ಸಾರ, ಸಾರೋದ್ಧಾರ. ಒಂದೊಂದು ನಾಮಕ್ಕೂ ನೂರು ನೂರು ಅರ್ಥಗಳು. ಭಗವಂತನ ಸಾವಿರ ರೂಪಗಳ ಸಾವಿರನಾಮಗಳೇ ವಿಷ್ಣುಸಹಸ್ರನಾಮ. ಅದು ಬೃಹತೀಸಹಸ್ರದ ಸಾರ. |