Log in
  • ಮುಖಪುಟ
  • ದೆಹಲಿ ದೇವಸ್ಥಾನ ಧ್ವಂಸವೋ? ಮಂದುವರೆದ ಸೆಕ್ಯುಲರ್ ಸುಲ್ತಾನರ ಅಟ್ಟಹಾಸವೋ?

ದೆಹಲಿ ದೇವಸ್ಥಾನ ಧ್ವಂಸವೋ? ಮಂದುವರೆದ ಸೆಕ್ಯುಲರ್ ಸುಲ್ತಾನರ ಅಟ್ಟಹಾಸವೋ?

ಸಂದೀಪ ಬಾಲಕೃಷ್ಣ, ಸಂಶೋಧಕ

ಮೂರು ವರ್ಷಗಳ ಹಿಂದೆ ದೆಹಲಿಗೆ ತೆರಳಿದಾಗ, ಐತಿಹಾಸಿಕ ಶೀಷ್‌ಗಂಜ್ ಗುರುದ್ವಾರವನ್ನು ನೋಡಲೇಬೇಕೆಂದು ನಿರ್ಧರಿಸಿದ್ದೆ. ಇಸ್ಲಾಮಿಕ್ ದೈತ್ಯ ಔರಂಗಜೇಬನ ವಿರುದ್ಧ ವೀರೋಚಿತವಾಗಿ ಹೋರಾಡಿದ ಸನಾತನಧರ್ಮದ ಗುರುಗಳಾದ ತೇಗ್ ಬಹದ್ದೂರರ ಪುಣ್ಯ ಸ್ಥಳವಿದು . ಗುರು ತೇಗ್ ಬಹದ್ದೂರ್, ಛತ್ರಪತಿ ಶಿವಾಜಿ ಮತ್ತು ಮಹಾರಾಜ ಛತ್ರಸಾಲರ ತ್ರಿವಳಿಯು ಔರಂಗಜೇಬನ ಜಿಹಾದಿ ಸಾಮ್ರಾಜ್ಯಕ್ಕೆ ಕೊಳ್ಳಿ ಇಡುವ ಮೂಲಕ, ದೊಡ್ಡ ದೈತ್ಯ ಶಕ್ತಿಯನ್ನು ನೆಲಕ್ಕುರುಳಿಸಬಹುದು ಎಂದು ತೋರಿಸಿಕೊಟ್ಟರು. ಅವರು ಅಂದು ಶುರುಮಾಡಿದ ಸನಾತನಧರ್ಮದ ಬುನಾದಿಯನ್ನು ಹೊಂದಿದ್ದ ಆಕ್ರಮಣಕಾರರ ವಿರುದ್ಧದ ಚಳುವಳಿಯು ಸ್ವಾತಂತ್ರ ಸಂಗ್ರಾಮದವರೆಗೂ ಭಾರತೀಯ ಜನರನ್ನು ಒಗ್ಗೂಡಿಸಿತ್ತು.

ಗುರು ತೇಗ್ ಬಹದ್ದೂರರ ಪಾರ್ಥಿವ ಶರೀರವನ್ನು, ತನ್ನ ಪ್ರಾಣವನ್ನು ಒತ್ತೆ ಇಟ್ಟು ಔರಂಗಜೇಬನ ಸೈನಿಕರ ಕಪಿಮುಷ್ಠಿಯಿಂದ ಬಿಡಿಸಿಕೊಂಡು ಬಂದ ಲಖಿ ಶಾ ವನ್ಸಾರವರ ಮನೆಯ ಜಾಗದಲ್ಲಿ ನಿರ್ಮಿತವಾದ ರಕಬ್ಗಂಜ್ ಗುರುದ್ವಾರದಲ್ಲಿಯೂ, ಸನಾತನಿಗಳ ಧರ್ಮನಿಷ್ಠೆಯನ್ನು ನೆನೆದು ರೋಮಾಂಚನವಾಯಿತು. ಲಖಿಯವರು ಗುರು ತೇಗ್ ಬಹುದ್ದೂರರ ಅಂತ್ಯಕ್ರಿಯೆಗಾಗಿ ತಮ್ಮ ಸ್ವಂತ ಮನೆಗೆ ಬೆಂಕಿ ಹಚ್ಚಿದ್ದರು ಎಂಬುದು ನೆನಪಿಸಿಕೊಳ್ಳಬೇಕಾದ ಸಂಗತಿ. ಹೀಗೆ ಸನಾತನಧರ್ಮದೊಂದಿಗೆ ಪುಣ್ಯ ಸ್ಥಳಗಳು ಸಹ ಅವಿಚ್ಛಿನ್ನವಾಗಿ ಗುರುತಿಸಿಕೊಂಡಿವೆ.

ಈ ಗುರುದ್ವಾರದ ಹೊರಗೆ ಕಾಲಿಡುತ್ತಿದ್ದಂತೆಯೇ, ಪಾಕಿಸ್ತಾನದಲ್ಲಿ ಕಾಲಿಡುತ್ತಿದ್ದೇನೆಯೊ? ಎಂದು ನನಗೆ ಅನ್ನಿಸಿದ್ದು ಸುಳ್ಳಲ್ಲ. ಕೂಗಳತೆಯ ದೂರದಲ್ಲಿರುವ ಸುನೇರಿ ಮಸ್ಜಿದ್ , ಲಾಹೋರ್- ಕರಾಚಿಯನ್ನು ಹೋಲುವ ಚಾಂದಿನಿ ಚೌಕ್, ಹಳೆಯ ದೆಹಲಿಯ ಇಸ್ಲಾಮಿಕ್ ವಾತಾವರಣ ನಿಮಗೆ ಪಾಕಿಸ್ತಾನವನ್ನು ಒಂದು ಕ್ಷಣ ಕಣ್ಣ ಮುಂದೆ ಬಂದು ಹೋಗುವಂತೆ ಮಾಡುತ್ತದೆ. ಮಸ್ಜಿದ್ ಔಲಿಯಾ , ಮಸ್ಜಿದ್ ಬಡಿ, ಮಸ್ಜಿದ್ ಮೊಮಿನ್, ಕುತುಬ್ ಖಾನಾ, ಲಾಲ್ ಮಸ್ಜಿದ್, ಜಾಮಿಯಾ ಮಸ್ಜಿದ್. ಮುಂತಾದ ಹಳೆಯ ದೆಹಲಿಯ ಸುತ್ತಮುತ್ತಲು ನಾಯಿಕೊಡೆಯಂತೆ ಹಬ್ಬಿರುವ ಹಲವಾರು ಇಸ್ಲಾಮಿ ಕೇಂದ್ರಗಳನ್ನು ನೋಡಿದೆ. ಹೀಗೆ ಯಾವುದೇ ಐತಿಹಾಸಿಕ ಅಥವಾ ಮತೀಯ ಹಿನ್ನೆಲೆ ಇಲ್ಲದ ಈ ಮತೀಯ ಕೇಂದ್ರಗಳಿಂದಾಗಿ ಸಂಸ್ಕೃತಿಯ ಭಾಗವಾಗಿರುವ ಶೀಷ್‌ಗಂಜ್ ಗುರುದ್ವರ ಮುಂತಾದ ಪುಣ್ಯ ಸ್ಥಳಗಳಿಗೆ ಇರುವ ಅಪಾಯದ ಅರಿವು ಅಂದೇ ನನಗಾಗಿತ್ತು.

ಚಾಂದಿನಿ ಚೌಕಿನ ದುರ್ಗಾ ದೇವಸ್ಥಾನವನ್ನು ಜಿಹಾದಿಗಳು ಹಾಳುಗೆಡುವುತ್ತಿದ್ದ ದೃಶ್ಯಾವಳಿಯನ್ನು ನೋಡಿದಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ, ಶೀಷ್‌ಗಂಜ್ ಗುರುದ್ವರದ ರೀತಿಯಲ್ಲಿಯೇ, ಈ ದೇವಾಲಯಕ್ಕೆ ಆದರ ಸುತ್ತಮುತ್ತಲಿದ್ದ ಜಿಹಾದಿ ವಾತಾವರಣದ ಅಪಾಯ ಇದ್ದೇಇತ್ತು. ಹಲವರು ಹೇಳುತ್ತಿರುವಂತೆ ದೇವಸ್ಥಾನದ ಮೇಲಿನ ದಾಳಿಯು ಆಕಸ್ಮಿಕ ಅಲ್ಲ. 300 ಜನ ಜಿಹಾದಿಗಳು ದೇವಸ್ಥಾನಕ್ಕೆ ನುಗ್ಗಿ ದುರ್ಗಾಮಾತೆಯ ವಿಗ್ರಹವನ್ನು ಪುಡಿಗಟ್ಟಿ, ಸುತ್ತಮುತ್ತಲಿದ್ದ ಹಿಂದೂ ಮನೆಗಳ ಮೇಲೆ ದಾಳಿಮಾಡಿ ಹಿಂದೂ ಮಹಿಳೆಯರ ಜೊತೆಗೆ ಅಸಭ್ಯವಾಗಿ ವರ್ತಿಸಿದ ಘಟನೆಯು ಎಂದಿಗೂ ಕಾಕತಾಳೀಯವಾಗಲು ಸಾಧ್ಯವಿಲ್ಲ.

ಹಿಂದಿ ಹೃದಯಭೂಮಿಯಲ್ಲಿ ಕಳೆದ ಒಂದು ತಿಂಗಳಿಂದ ಜಿಹಾದಿಗಳು ಮುಸಲ್ಮಾನರಲ್ಲಿ ತುಂಬಿಸುತ್ತಿರುವ ದ್ವೇಷದ ಒಂದು ಚಿಕ್ಕ ತುಣುಕು ಅಷ್ಟೇ ದೆಹಲಿಯಲ್ಲಿ ನಡೆದ ಈ ಘಟನೆ. ಯಾರೂ ಊಹಿಸದ ರೀತಿಯಲ್ಲಿ ನರೇಂದ್ರಮೋದಿ ಅವರು 303 ಸ್ಥಾನಗಳೊಂದಿಗೆ ಪುನರ್‌ಆಯ್ಕೆಯಾಗಿರುವುದು, ಸೆಕ್ಯುಲರ್‌ವಾದಿಗಳ ನಿದ್ದೆಗೆಡಿಸಿದೆ. ಇತ್ತೀಚಿನ ಚುನಾವಣೆಯ ನಂತರವಂತೂ ಅಮಿತ್ ಶಾ-ಮೋದಿ ಜೋಡಿಯಿಂದ ಕೇಂದ್ರದ ಅಧಿಕಾರವನ್ನು ಕಸಿದುಕೊಳ್ಳುವುದು ಸಾಧ್ಯವಾಗದ ಮಾತು ಎಂಬುದು ಅವರಿಗೆ ಅರಿವಾಗಿದೆ, ಇದರ ಮೇಲೆ ದೇಶದಾದ್ಯಂತ ತಮ್ಮ ಈ ಸೆಕ್ಯುಲರ್ ಪುಂಡಾಟಗಳನ್ನು ಮುಂದುವರೆಸಲು ಯಾವ ರಾಜ್ಯದಲ್ಲಿಯೂ ಅವರ ಸ್ವಂತ ಅಸ್ತಿತ್ವವಿಲ್ಲ. ಹೀಗೆ ಅಸಹಾಯಕರಾಗಿರುವ ಈ ತಥಾಕಥಿತ ಜಾತ್ಯತೀತರು ಬೀದಿ ಗಲಭೆಗಳ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಇದಕ್ಕಾಗಿ ತಮ್ಮ ಅತ್ಯಂತ ನಂಬಿಕಸ್ಥ ಶಾಂತಿಯನ್ನು ಸಾರುವ ಜಿಹಾದಿಗಳ ಮೊರೆಹೋಗಿರುವುದು ಆಶ್ಚರ್ಯಕರ ಸಂಗತಿಯೇನಲ್ಲ. ಹಿಂದೂಗಳ ಮೇಲೆ ಅಪ್ರಚೋದಿತ ದಾಳಿಗಳನ್ನು ಮಾಡುವ ಮೂಲಕ, ದೇಶದಲ್ಲಿ ಕೋಮುಗಲಭೆಯಂತಹ ವಾತಾವರಣ ಸೃಷ್ಟಿಸಿ, 2002ರಲ್ಲಿ ಗುಜರಾತ್ ಸರ್ಕಾರ ಹಾಗೂ ನರೇಂದ್ರಮೋದಿಯವರ ವಿರುದ್ಧ ಈ ಜಾತ್ಯಾತಿತರು ಅನುಸರಿಸಿದ ಕ್ರಮದ ಮುಂದುವರೆದ ಭಾಗವಿದು.

ಹತ್ತು ವರ್ಷಗಳ ಕೆಳಗಿರುವ ಬಾಲಕಿಯರ ಮೇಲೆ ಅತ್ಯಾಚಾರ, ಹಲವಾರು ಗುಡಿಗಳ ಮೇಲೆ ದಾಳಿ, ಹಿಂದೂಗಳು ಊರನ್ನು ಬಿಟ್ಟು ತೆರಳುವಂತೆ ಮೌಲ್ವಿಗಳು ಹೊರಡಿಸುವ ಫತ್ವಾ ಲವ್ ಜಿಹಾದ್, ಸಾಧುಗಳ ಮೇಲೆ ದಾಳಿ, ಗುಂಪು ಘರ್ಷಣೆಗಳು ಮುಂತಾದವುಗಳ ಸಂಖ್ಯೆ ಕಳೆದ ಒಂದು ತಿಂಗಳಲ್ಲಿ ಗಣನೀಯವಾಗಿ ದೇಶದಾದ್ಯಂತ ಹೆಚ್ಚಾಗಿರುವುದನ್ನು ನಾವು ನೋಡಬಹುದು. ಈ ಎಲ್ಲಾ ಸಂಗತಿಗಳು ಕಾಕತಾಳೀಯವಾಗಿ ಇರಲು ಸಾಧ್ಯವೇ ಇಲ್ಲ. ಈ ಘಟನೆಗಳ ಸರಮಾಲೆಯು ಜಿನ್ನಾ ಕಲ್ಕತ್ತೆಯಲ್ಲಿ ನಡೆಸಿದ ‘ಡೈರೆಕ್ಟ್ ಆಕ್ಷನ್ ದಿನ’ದ ಇಂದಿನ ಸ್ವರೂಪ ಆಗಿದೆ. ಭಾರತದಾದ್ಯಂತ ಹಬ್ಬಿರುವ ಮುಸಲ್ಮಾನರೇ ಈ ಜಾತ್ಯತೀತರು ಮತ್ತು ಜಿಹಾದಿಗಳ ಮುಖ್ಯ ದಾಳವಾಗಿರುವುದರಿಂದ, ಇದು ಇನ್ನೂ ಹೆಚ್ಚು ಅಪಾಯಕಾರಿ. ಹಿಂದೂಗಳು ಸಹ ಸಂಘಟಿತರಾಗಿಲ್ಲದೆ ಇರುವುದು ಇನ್ನೂ ಆತಂಕಕಾರಿ ಸಂಗತಿಯಾಗಿದೆ.

ಯೋಚಿಸಿ, ಭಾರತದಲ್ಲಿ ಇಂದು ಅತಿಹೆಚ್ಚು ನಾಸ್ತಿಕವಾದವನ್ನು ಒಪ್ಪಿಕೊಳ್ಳುತ್ತಿರುವುದು ಯಾರು? ಮುಸಲ್ಮಾನರು ಇಲ್ಲಿಯೇ ಅಪ್ರಚೋದಿತ ದಾಳಿ ನಡೆಸಿದರೂ ಅವರ ಪರವಾಗಿ, ಅವರ ಧ್ವನಿಯಾಗಿ ನಿಲ್ಲುವವರು ಯಾರು? ಹಫಿಂಗಟನ್ ಪೋಸ್ಟ್‌ನ ವಿಚಿತ್ರ ವರದಿ ಹೀಗಿತ್ತು: ‘ಪಾರ್ಕಿಂಗ್ ವಿಷಯದಲ್ಲಿ ನಡೆದ ಗಲಾಟೆಯನ್ನು ಬಿಜಿಪಿ ಬೆಂಬಲಿಗರು ಭಯೋತ್ಪಾದನಾ ದಾಳಿ ಎಂದಿದ್ದಾರೆ.’ 2014ರಲ್ಲೇ ನಾವು ಹೇಳಿದಂತೆ ಭಾರತವನ್ನು ಮೋದಿ ಹಿಂದು ಬಹುಸಂಖ್ಯಾತ ಫ್ಯಾಸಿಸ್ಟ್ ದೇಶ ಮಾಡಹೊರಟಿದ್ದಾರೆ ಎಂಬಿತ್ಯಾದಿ ಲೇಖನಗಳು ಮುಂದಿನ ದಿನಗಳಲ್ಲಿ ಬಂದಲ್ಲಿ ಆಶ್ಚರ್ಯವೇನಿಲ್ಲ. ನ್ಯೂಯಾರ್ಕ್ ಟೈಮ್ಸ್, ವಾಷಿಂಗ್ಟನ್ ಪೋಸ್ಟ್ ಮುಂತಾದ ವಿದೇಶಿ ಪತ್ರಿಕೆಗಳಿಗೆ ಶೋಷಣೆಗೊಳಗಾಗಿರುವ ಹಿಂದೂಗಳನ್ನು ತುಚ್ಛವಾಗಿ ಚಿತ್ರಿಸಿ, ಎಲ್ಲೆಡೆಯೂ ದಾಂದಲೆ ಎಬ್ಬಿಸುವ ಜಿಹಾದಿಗಳನ್ನು ಶೋಷಿತರು ಎಂದು ಜಗತ್ತಿಗೆ ಬಿಂಬಿಸುವ ತಥಾಕಥಿತ ಲುಟಿಯನ್ಸ್ ಮೀಡಿಯಾ ಪತ್ರಕರ್ತರ ಧರ್ಮ ಯಾವುದು? ಹೀಗೆ ತಮ್ಮ ವೈಯಕ್ತಿಕ ಸ್ವಾರ್ಥಕ್ಕೋಸ್ಕರ ಜಾತ್ಯತೀತವಾದವನ್ನು ಪಸರಿಸಿ ಹಾಗೂ ಜಿಹಾದಿಗಳನ್ನು ಬೆಂಬಲಿಸುವ ಪಟ್ಟಭದ್ರ ಹಿತಾಸಕ್ತಿಗಳ ಮೇಲೆ ಅಂದಾಭಿಮಾನವನ್ನು ಹೊಂದಿರುವ ಹಿಂದೂಗಳು ಜಾಗೃತ ವಾಗುವವರೆಗೂ ಈ ರೀತಿಯ ದಾಳಿಗಳು ಸರ್ವೇಸಾಮಾನ್ಯ.

ಇಂತಹ ಘಟನೆಗಳು ನಡೆದಾಗಲೂ, ಯಾವುದೇ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ನರೇಂದ್ರಮೋದಿ ಮತ್ತು ಅಮಿತ್ ಶಾರವರನ್ನು ದೂಷಿಸುವುದು ತರವಲ್ಲ. ಪ್ರಧಾನಿ-ಗೃಹಮಂತ್ರಿಗಳು ಈ ಘಟನೆಗೆ ಪ್ರತ್ಯತ್ತರ ನೀಡಲು ಗುಂಪುಕಟ್ಟಿ ಹೊರಡಬೇಕೆನ್ನುವುದು ಮೂರ್ಖತನ, ಅಕಲ್ಪನೀಯ. ದೇಶದ ಪ್ರಧಾನಿಗಳು ಹಾಗೂ ಗೃಹಮಂತ್ರಿಗಳನ್ನು ಸಿಕ್ಕಿಹಾಕಿಸಲು ಈ ಜಾತ್ಯತೀತರು ಹೂಡಿರುವ ಬಲೆಯೇ ಈ ಎಲ್ಲ ಫಟನೆಗಳು. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸಲು ಇನ್ನೂ ಹಲವಾರು ಮಾರ್ಗಗಳಿವೆ. ನೆನಪಿಸಿಕೊಳ್ಳಿ ಜಮ್ಮು-ಕಾಶ್ಮೀರದ ಕುರಿತಾದ ಸಾಂವಿಧಾನಿಕ ತಿದ್ದುಪಡಿಯನ್ನು ತರಲು ನಾವು ಅನೇಕ ದಶಕಗಳ ಕಾಲ ಶ್ರಮಿಸಬೇಕಾಯಿತು. ಆದ ಕಾರಣದಿಂದಾಗಿ ತಾಳ್ಮೆ ಕಳೆದುಕೊಳ್ಳದೆ , ದುಷ್ಟರ ಬಲೆಗೆ ಬೀಳದೆ ಅವರು ತಂದೊಡ್ಡುತ್ತಿರುವ ಸವಾಲುಗಳನ್ನು ಎದುರಿಸಬೇಕಾಗಿದೆ. ಇಂತಹ ಘಟನೆಗಳಿಂದ ಹಿಂದೂಗಳು ನರೇಂದ್ರ ಮೋದಿಯವರ ಮೇಲೆ ಹತಾಶರಾಗಿ ಅವರನ್ನು ದ್ವೇಷಿಸಲಿ ಎಂಬುದೇ ಈ ಜಾತ್ಯತೀತರ ಮುಖ್ಯ ಗುರಿ. ಯಾವುದೇ ಅಪಪ್ರಚಾರಕ್ಕೂ ಬಗ್ಗದೆ ನರೇಂದ್ರ ಮೋದಿಯವರ ಜೊತೆ ಬಂಡೆಯಂತೆೆ ನಿಂತ ಮತದಾರರ ಮನಸ್ಸಿನಲ್ಲಿ ಹತಾಶ ಭಾವನೆ ಮೂಡಿಸುವ ತಂತ್ರದ ಮುಂದುವರಿದ ಭಾಗವೇ ಇದು. ಯಾವುದೇ ಕಾರಣಕ್ಕೂ ನಾವು ಸಮೃದ್ಧ ಅಖಂಡ ಹಿಂದೂರಾಷ್ಟ್ರದ ಗುರಿಯಿಂದ ವಿಚಲಿತರಾಗಬಾರದು.

ಕೊನೆಯದಾಗಿ, ಎಲ್ಲಿಯವರೆಗೂ ಹಿಂದೂಗಳು ತಮ್ಮ ಮಕ್ಕಳನ್ನು ಕ್ರಿಶ್ಚಿಯನ್ ಶಾಲೆಗಳಿಗೆ ಕಳುಹಿಸಿ ವಿದ್ಯಾವಂತರಾಗಲಿ ಎಂದು ಆಶಿಸುತ್ತಾರೋ, ಎಲ್ಲಿಯವರೆಗೆ ಪಠ್ಯಪುಸ್ತಕಗಳಲ್ಲಿ ನಮ್ಮ ಭವ್ಯಪರಂಪರೆಯನ್ನು ನಮ್ಮ ಮಕ್ಕಳಿಂದ ಮುಚ್ಚಿಡಲಾಗುತ್ತದೆಯೋ, ಹಿಂದೂಗಳು ತಮ್ಮ ಮಕ್ಕಳು ಯಾರ ಸಹವಾಸ ಮಾಡುತ್ತಿದ್ದಾರೆ, ಯಾರನ್ನು ಅನುಕರಿಸುತ್ತಿದ್ದಾರೆ ಎಂಬುದರ ಬಗ್ಗೆ ಗಮನಹರಿಸುವುದಿಲ್ಲವೋ, ನಮ್ಮ ಭವ್ಯಪರಂಪರೆ ಸಂಸ್ಕೃತಿ ಇತಿಹಾಸದ ಬಗ್ಗೆ ಮುಂದಿನ ತಲೆಮಾರಿನವರಿಗೆ ನಾವು ಜಾಗೃತರನ್ನಾಗಿ ಮಾಡುವುದಿಲ್ಲವೋ ಅಲ್ಲಿಯವರೆಗೂ ದುರ್ಗಾ ಮೂರ್ತಿಯು ಭಿನ್ನವಾಗುತ್ತಲೆ ಇರುತ್ತದೆ.


This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management