ಎಳ್ಳು ತಿನ್ನಬಹುದೇ? ಡಾ. ಶ್ರೀವತ್ಸಭಾರದ್ವಾಜ್, ದತ್ತ ಆಯುರ್ಧಾಮ ![]() ಆರೋಗ್ಯಕ್ಕಾಗಿ ಎಳ್ಳು ಸೇವಿಸಿರಿ ಎಂದ ಕೂಡಲೇ, ಅಯ್ಯೋ! ಅದು ಉಷ್ಣ ಎನ್ನುತ್ತಾರೆ. ಎಳ್ಳೆಣ್ಣೆ ಹಚ್ಚಿ ಅಭ್ಯಂಗ ಸ್ನಾನಮಾಡಿ ಎಂದರೆ ಅಯ್ಯೋ! ಅದು ತುಂಬಾ ತಂಪು, ಶೀತವಾಗುತ್ತದೆ ಎಂದು ಗೊಣಗುವವರ ಸಂಖ್ಯೆಯೇ ನಮ್ಮಲ್ಲಿ ಜಾಸ್ತಿ. ಭಾರತೀಯರು ಎಳ್ಳನ್ನು ಎಣ್ಣೆರೂಪದಲ್ಲಿ, ಆಹಾರದಲ್ಲಿ, ಹೋಮ-ಹವನ-ತರ್ಪಣಾದಿ ಕ್ರಿಯೆಗಳಲ್ಲೋ, ಔಷಧದಲ್ಲಿ ಉಪಯೋಗಿಸುತ್ತಾರೆ. ಎಳ್ಳಿನಲ್ಲಿ ಕೊಬ್ಬು, ವಿಟಮಿನ್, ಕಬ್ಬಿಣ, ಕ್ಯಾಲ್ಸಿಯಮ್, ಫೊಸ್ಪರಸ್, ಪ್ರೊಟೀನ್, ಜಿಂಕ್ ಹೀಗೆ ಹಲವಾರು ಘಟಕಗಳು ಕಂಡುಬರುತ್ತವೆ. ಎಳ್ಳಲ್ಲಿರುವ ಕೊಬ್ಬಿನಂಶವು ದೇಹದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಕುಗ್ಗಿಸುತ್ತದೆ. ದೇಹದ ಅಧಿಕ ಬೊಜ್ಜು ಹಾಗೂ ಕೊಬ್ಬಿನಂಶವನ್ನು ಕಡಿಮೆಗೊಳಿಸುತ್ತದೆ. ಚರ್ಮ, ಮೂಳೆ, ನರಮಂಡಲ, ಮಾಂಸಖಂಡಗಳನ್ನು ಪೋಷಿಸುತ್ತದೆ. ಎಳ್ಳಲ್ಲಿ ಸಾಕಷ್ಟು ನಾರಿನಂಶವಿದ್ದು ಮಲಬದ್ಧತೆ, ಮೂಲವ್ಯಾಧಿಗಳಂತಹ ಸಮಸ್ಯೆಗಳ ನಿವಾರಣೆಮಾಡುತ್ತದೆ. ಇದರಲ್ಲಿ ’ಫೊಲಿಕ್ಏಸಿಡ್’ ಅಧಿಕವಾಗಿ ಕಂಡುಬರುವ ಕಾರಣ ಇದನ್ನು ಗರ್ಭಧರಿಸುವ ಮುನ್ನ ದಿನನಿತ್ಯ ಒಂದು ಚಮಚ ತಿನ್ನಬಹುದು. ಗರ್ಭಧರಿಸಿದ ಮೇಲೆ ಎಳ್ಳಿನ ಸೇವನೆಯನ್ನು ನಿಲ್ಲಿಸಬೇಕು. ಇದರ ಸಂಪೂರ್ಣ ಪ್ರಯೋಜನ ಪಡೆಯಲು ಆಹಾರದಲ್ಲಿ ಶುದ್ಧವಾದ ಕಪ್ಪು ಎಳ್ಳು ಅಥವಾ ಎಳ್ಳೆಣ್ಣೆಯನ್ನು ಬಳಸಬೇಕು. ಪ್ರತಿನಿತ್ಯ ಒಂದು ಹೊತ್ತಿನ ಆಹಾರದ ಬದಲಿಗೆ ಎಳ್ಳುಪಾನಕ ಸೇವಿಸಿದರೆ ದೇಹದ ಬೊಜ್ಜು ನಿವಾರಣೆಯಾಗುವುದಲ್ಲದೆ ಸಂಧಿಗಳ ನೋವು, ಸವೆತವನ್ನು ತಡೆಗಟ್ಟಬಹುದು. ಮಕ್ಕಳು ಪ್ರತಿದಿನ ಎರಡು ಎಳ್ಳುಂಡೆ ಸೇವಿಸಿದರೆ, ಮೂಳೆ, ಹಲ್ಲು ಚೆನ್ನಾಗಿ ಬೆಳೆಯುವುದು. ಏಕಾಗ್ರತೆ, ರೋಗನಿರೋಧಕಶಕ್ತಿ ಹೆಚ್ಚುವುದು. ಶರೀರದ ಬೆಳವಣಿಗೆಯು ಸಹಜವಾಗಿ ಆಗುವುದು. ಎಳ್ಳು ಸೇವನೆಯಿಂದ ಮುಟ್ಟಿನಲ್ಲಿ ಏರುಪೇರು, ಮುಟ್ಟಿನ ನೋವಿನಿಂದ ಪರಿಹಾರ ಸಿಗುವುದು. ಎಳ್ಳೆಣ್ಣೆಯಲ್ಲಿ ವಿಟಮಿನ್ ಇ ಹಾಗೂ ಕೀಟಾಣು, ವೈರಾಣು ನಾಶಕ ಗುಣಗಳಿವೆ. ಹಾಗಾಗಿ ದಿನನಿತ್ಯ ’ಆಯಿಲ್ ಪುಲ್ಲಿಂಗ್’ ಮಾಡಿದಲ್ಲಿ ವಸಡಿನ ರಕ್ತಸ್ರಾವ, ನೋವು, ಹಲ್ಲು ಹುಳುಕಾಗುವಿಕೆ, ಬಾಯಿಹುಣ್ಣಿನಂತ ಸಮಸ್ಯೆಗಳನ್ನು ಸುಲಭವಾಗಿ ಗುಣಪಡಿಸಬಹುದು. ಎಳ್ಳೆಣ್ಣೆಯು ಚರ್ಮದ ಕಾಂತಿ ವೃದ್ಧಿಸುತ್ತದೆ. ಕೂದಲು ಕಪ್ಪಾಗಿ, ಚೆನ್ನಾಗಿ ಬೆಳೆಯುವಂತೆ ಮಾಡುತ್ತದೆ. ದೇಹವನ್ನು ತಂಪಾಗಿರಿಸುತ್ತದೆ. ಚರ್ಮದ ಮೇಲಿನ ಸುಕ್ಕು, ಗಾಯ, ಬಿರುಕು, ಕಲೆಗಳನ್ನು ಹೋಗಲಾಡಿಸಿ ತ್ವಚೆಯನ್ನು ಕೋಮಲಗೊಳಿಸುತ್ತದೆ. ಕೂದಲು ಮತ್ತು ತ್ವಚೆಯ ರಕ್ಷಣೆಗೆ ವಾರಕ್ಕೊಮ್ಮೆಯಾದರೂ ಎಳ್ಳೆಣ್ಣೆ ಸ್ನಾನವನ್ನು ಮಾಡಬೇಕು. ಮುಖದಲ್ಲಿ ಕಪ್ಪು ಕಲೆಗಳಿವೆಯಾ? ಕಪ್ಪೆಳ್ಳನ್ನು ಹಾಲಲ್ಲಿ ನೆನೆಸಿ, ರುಬ್ಬಿ, ಸಾಯಂಕಾಲ ಅರ್ಧಗಂಟೆ ಲೇಪಿಸಿರಿ. ಮುಟ್ಟಿನಲ್ಲಿ ನೋವೇ? ಮುಟ್ಟಾಗುವ ಐದು ದಿನ ಮೊದಲಿನಿಂದ ಒಂದು ದೊಡ್ಡ ಚಮಚ ಕಪ್ಪೆಳ್ಳನ್ನು ಹುರಿದು, ಹುಡಿಮಾಡಿ, ಒಂದು ಲೋಟ ನೀರಲ್ಲಿ ಕುದಿಸಿ, ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೊಮ್ಮೆ ಕುಡಿಯಿರಿ. ಹಿಮ್ಮಡಿ ಒಡೆತ/ ನೋವೇ? ರಾತ್ರಿ ಮಲಗುವ ಮುನ್ನ ಎಳ್ಳೆಣ್ಣೆ ಹಚ್ಚಿ, ಬಿಸಿನೀರಿಗೆ ಉಪ್ಪು ಸೇರಿಸಿ, ಹತ್ತು ನಿ |