Log in

ದೇಶದ ಭದ್ರತೆ 5 ಜಿ ನೀತಿ

ಸಂತೋಷ್ ಕೃಷ್ಣಮೂರ್ತಿ

ಭಾರತ ತನ್ನ 5 ಜಿ ಸೇವೆಯನ್ನು ಸೆಪ್ಟೆಂಬರ್ 2019 ರಿಂದ ಪರೀಕ್ಷಿಸುವ ತಯಾರಿಯಲ್ಲಿದೆ. ಈ ಪರೀಕ್ಷೆಯಲ್ಲಿ ಯಾವ ಕಂಪನಿ ಭಾಗವಹಿಸಬಹುದೆಂದು ನಿರ್ಧರಿಸಲು ಒಂದು ಸಮಿತಿಯನ್ನು ನೇಮಿಸಿದೆ. ಈ ಸಮಿತಿಯ ಅಧ್ಯಕ್ಷರಾಗಿ ಕೆ. ವಿಜಯರಾಘವನ್ ಅವರನ್ನು ನೇಮಿಸಲಾಗಿತ್ತು. ಈ ಸಮಿತಿ ಗೃಹಸಚಿವಾಲಯ, ವಿದೇಶ ಸಚಿವಾಲಯ, ಸೈನ್ಸ್ ಅಂಡ್ ಟೆಕ್ನಾಲಜಿ ಇಲಾಖೆ ಮತ್ತು ಗುಪ್ತಚರ ಇಲಾಖೆಗಳನ್ನು ಸದಸ್ಯರಾಗಿ ಒಳಗೊಂಡಿತ್ತು. ಭದ್ರತಾ ಕಾಳಜಿಗಳಿಗಿಂತ ವಾಣಿಜ್ಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಬಾರದು ಎಂದು ಗುಪ್ತಚರ ಇಲಾಖೆ ಒತ್ತಿ ಹೇಳಿದೆ ಎಂದು ವರದಿಯಾಗಿದೆ. ಈ ಎಲ್ಲಾ ವಿಷಯದಲ್ಲಿ ಪ್ರಪಂಚದ ಬಹಳ ದೇಶಗಳ ಒಂದು ಸಾಮಾನ್ಯ ಅಂಶವೇನೆಂದರೆ ಅದು ಹೂವಾವೇ (Huawei).

ಇಂದು ಪ್ರಪಂಚದ ಬಹಳಷ್ಟು ದೇಶಗಳು 5ಜಿ ಸೇವೆ ನೀಡಲು ಹುವಾವೇ ಸಂಸ್ಥೆಯನ್ನು ನಂಬಲು ತಯಾರಿಲ್ಲ.

ಈಗಷ್ಟೇ ಬಹುಮತದಿಂದ ಗೆದ್ದಿರುವ ಮೋದಿ ಸರ್ಕಾರ ಕೂಡ ಈ ವಿಷಯವನ್ನು ಬಹಳ ಸೂಕ್ಷ್ಮರೀತಿಯಲ್ಲಿ ಪರಿಗಣಿಸಿದೆ. ಇಂಗ್ಲೆಂಡ್, ಅಮೇರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಮತ್ತು ಯೂರೋಪ್‌ನ ಬಹಳಷ್ಟು ದೇಶಗಳು 5 ಜಿ ಸೇವೆಯನ್ನು ಹುವಾವೇ ಹೊರತುಪಡಿಸಿ ಬೇರೆ ಸಂಸ್ಥೆಯ ತಂತ್ರಜ್ಞಾನ ಬಳಸಲು ತೀರ್ಮಾನಿಸಿವೆ. ಈ ಎಲ್ಲಾ ಬೆಳವಣಿಗೆಯನ್ನು ತಿಳಿಯಲು 5 ಜಿ ಮತ್ತು ಹೂವಾವೇ ಬಗ್ಗೆ ತಿಳಿಯೋಣ.

5ಜಿ ಎಂದರೆ ಏನು?

5 ಜಿ ಎಂದರೆ ಐದನೇ ಜನರೇಶನ್ (ಫಿಫ್ತಜನರೇಶನ್). ಇದು ನಾವು ಬಳಸುವ 5 ಜಿ ಇಂಟರ್ನೆಟ್‌ಗಿಂತ ಬಹಳ ವೇಗವಾಗಿರುತ್ತದೆ. ಇದು ಸೆಕೆಂಡಿಗೆ 20 ಗಿಗಾಬೀಟ್‌ಗಳವರೆಗೆ ಬ್ಯಾಂಡ್ವಿಡ್ತ್ ಒದಗಿಸುವ ನಿರೀಕ್ಷೆಯಿದೆ. ಹೈ-ಡೆಫಿನಿಷನ್ ಚಲನಚಿತ್ರಗಳನ್ನು ತಕ್ಷಣ ಡೌನ್‌ಲೋಡ್‌ಮಾಡಲು ಮತ್ತು ವರ್ಚುವಲ್ ಅಪ್ಲಿಕೇಶನ್, ಸ್ವಯಂಚಾಲಿತ ವಾಹನ ಮತ್ತು ಇಂಟರ್ನೆಟ್ ಬಳಸುವ ಎಲ್ಲಾ ಸಾಧನಗಳ ರೂಪವನ್ನೇ ಬದಲಾಯಿಸಲಿದೆ. ಯಾವುದೇ ವೈರ್ ಇಲ್ಲದೆ ಇಂಟರ್‌ನೆಟ್ ಬಳಸುವ ಮುಂದಿನ ತಂತ್ರಜ್ಞಾನಕ್ಕೆ ಮುನ್ನುಡಿಯಾಗಲಿದೆ.

ಮುಂದಿನ ತಂತ್ರಜ್ಞಾನ ಇರುವುದು ದತ್ತಾಂಶ ಸಂಗ್ರಹಣೆಯಲ್ಲಿ. ಈ ವಿಷಯದಲ್ಲಿ ಇಂಟರ್ನೆಟ್ ಬಹಳ ದೊಡ್ಡಪಾತ್ರ ವಹಿಸಲಿದೆ. ಇದನ್ನು ಮನಗಂಡು ಚೀನಾ ತನ್ನ ಕಂಪನಿ ಮೂಲಕ ಪ್ರಪಂಚದ ಇಂಟರ್ನೆಟ್ ಸಾಧನಗಳ ದೊಡ್ಡ ಮಾರುಕಟ್ಟೆ ಮೂಲಕ ದತ್ತಾಂಶ ಸಂಗ್ರಹಿಸುವ ಆರೋಪ ಎದುರಿಸುತ್ತಿದೆ.

ಹುವಾವೇ ಚೀನಾದ ದೊಡ್ಡ ಸಂಸ್ಥೆ. ಇದು ಪ್ರಪಂಚದ ಎರಡನೇ ದೊಡ್ಡ ಮೊಬೈಲ್ ಮತ್ತು ಇಂಟರ್ನೆಟ್ ಬಳಸುವ ಸಾಧನ.

5 ಜಿ ಬಳಸುವ ಸಾಧನಗಳನ್ನು ಮಾಡುವ ದೊಡ್ಡ ಕಂಪನಿ. ಇದರ ವಿರುದ್ಧ ಮೊದಲು ತಿಳಿದಿದ್ದು, 2012ರ ಅಮೇರಿಕ ಕಾಂಗ್ರೆಸ್‌ನ ಒಂದು ವರದಿಯಿಂದ. ಈ ವರದಿ ಹುವಾವೇ ಹೇಗೆ ಬೇರೆ ಸಂಸ್ಥೆಗಿಂತ ವಿಭಿನ್ನ ಎಂದು ತಿಳಿಸುತ್ತದೆ. ಹುವಾವೇ ಎಲ್ಲಿ ವ್ಯಾಪಾರಮಾಡುತ್ತದೆ ಎಂದು ತಿಳಿಯಲು ಇದು ಸಹಾಯಕವಾಗಿದ್ದರೂ, ಅದು ಎಲ್ಲಿಲ್ಲ ಎಂದು ತಿಳಿಯುವುದಕ್ಕೆ ಹೆಚ್ಚು ಸಹಾಯಮಾಡುತ್ತದೆ. ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವುದರ ಹೊರತಾಗಿ, ಹುವಾವೇ ದೂರಸಂಪರ್ಕಜಾಲಗಳನ್ನು ಮತ್ತು ಸೇವೆಗಳನ್ನು ನಿರ್ಮಿಸುತ್ತದೆ ಮತ್ತು ದೂರಸಂಪರ್ಕ ಉದ್ಯಮಗ್ರಾಹಕರಿಗೆ ಪರಿಹಾರಗಳನ್ನು ಒದಗಿಸುತ್ತದೆ. ಹುವಾವೇ 170 ಕ್ಕೂ ಹೆಚ್ಚು ದೇಶಗಳಲ್ಲಿ 180,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ.

2011ರಲ್ಲಿ ಹುವಾವೇ ತನ್ನ ಮೇಲೆ ಆರೋಪ ಬಂದಾಗ ಅಮೇರಿಕ ಸರ್ಕಾರಕ್ಕೆ ಪತ್ರ ಬರೆದು ತನಿಖೆ ನಡೆಸುವಂತೆ ಕೋರುತ್ತದೆ. ಹುವಾವೇ ಅಮೆರಿಕದಲ್ಲಿ ವ್ಯಾಪಾರಮಾಡಲು ಇದು ಮುಖ್ಯ ಎಂದು ಮನಗಂಡು ಈ ಪತ್ರ ಬರೆಯುತ್ತದೆ. ಹೀಗೆ ಅದರ ವಿರುದ್ಧ ತನಿಖೆ ಪ್ರಾರಂಭಿಸಿದ ಅಮೆರಿಕ ಇಂದು ಬಹಳಷ್ಟು ದೇಶಗಳು ಹುವಾವೇ ಮೇಲೆ ನಿರ್ಬಂಧ ಹೇರಲು ಮುನ್ನುಡಿ ಬರೆಯುತ್ತದೆೆ.

ಅಮೆರಿಕ ಹೌಸ್ ಪರ್ಮನೆಂಟ್ ಸೆಲೆಕ್ಟ್‌ಕಮಿಟಿ ನವೆಂಬರ್ 2011 ರಿಂದ ಹುವಾವೇ ಮೇಲೆ ತನಿಖೆ ಪ್ರಾರಂಭಿಸಿತು. ತನಿಖೆ ಪ್ರಾರಂಭಿಸುವ ಮುನ್ನ ಪ್ರಾಥಮಿಕ ಪರಿಶೀಲನೆ ನಡೆಸಿತು. ದೂರಸಂಪರ್ಕ ಕ್ಷೇತ್ರ, ನಿರ್ದಿಷ್ಟ ಕಂಪನಿಗಳ ಇತಿಹಾಸಗಳು ಮತ್ತು ಕಾರ್ಯಾಚರಣೆಗಳ ಬಗ್ಗೆ ಪರಶೀಲನೆ ನಡೆಸಿತು. ಹುವಾವೇ ಸಂಸ್ಥೆ ಚೀನಾದ ಸರ್ಕಾರ ಮತ್ತು ಅಲ್ಲಿನ ಮಿಲಿಟರಿ ಜೊತೆ ಹೊಂದಿರುವ ಸಂಭಾವ್ಯ ಸಂಬಂಧದ ಬಗ್ಗೆ ಪರಶೀಲನೆ ನಡೆಯಿತು. ಸುರಕ್ಷತೆಯಲ್ಲಿ ದೂರಸಂಪರ್ಕ ಕ್ಷೇತ್ರವು ನಿರ್ಣಾಯಕ ಪಾತ್ರವಹಿಸುತ್ತದೆ. ರಾಷ್ತ್ರದ ಭದ್ರತೆ ಮತ್ತು ವಿದೇಶಿ ಗುಪ್ತಚರ ಇಲಾಖೆಗಳ ದೃಷ್ಟಿಯಿಂದ ದೂರಸಂಪರ್ಕ ಕ್ಷೇತ್ರ ಬಹಳ ಮುಖ್ಯ.

ಹುವಾವೇ ಸಂದರ್ಶನಗಳು, ವ್ಯಾಪಕ ತನಿಖೆ ಮತ್ತು ಪುನರಾವರ್ತಿತ ಡಾಕ್ಯುಮೆಂಟ್ ವಿನಂತಿಗಳ ಹೊರತಾಗಿಯೂ, ಲಭ್ಯವಿರುವ ಮೂಲಮಾಹಿತಿಯ ವಿಮರ್ಶೆ ಮತ್ತು ಸಾಕ್ಷಿಗಳೊಂದಿಗೆ ಮುಕ್ತ ವಿಚಾರಣೆಯ ನಂತರ ಸಮಿತಿಯು ಸಹಕಾರದ ಮಟ್ಟದಲ್ಲಿ ಅತೃಪ್ತಿಹೊಂದಿದೆ ಮತ್ತು ಹುವಾವೇ ಪ್ರಾಮಾಣಿಕವಾಗಿ ತನಿಖೆಗೆ ಸಹಕರಿಸಿಲ್ಲ ಎಂದು ವರದಿಮಾಡಿದೆ. ಹುವಾವೇ ಅದರ ಬಗ್ಗೆ ಸ್ಪಷ್ಟ ಮತ್ತು ಸಂಪೂರ್ಣ ಮಾಹಿತಿಯನ್ನು ಒದಗಿಸಲಿಲ್ಲ

ಸಾಂಸ್ಥಿಕ ರಚನೆ ಮತ್ತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳು, ಮತ್ತು ಬೆಂಬಲಕ್ಕಾಗಿ ಅದು ಚೀನಾ ಸರ್ಕಾರವನ್ನು ಅವಲಂಬಿಸಿದೆ. ಕಂಪನಿಯು ಸಾರ್ವಜನಿಕವಾಗಿಲ್ಲ, ಯಾವುದೇ ಸ್ಮಾರ್ಟ್ ಮಾರುಕಟ್ಟೆಯಲ್ಲಿ ವ್ಯಾಪಾರವಾಗುವುದಿಲ್ಲ ಮತ್ತು ಯು.ಎಸ್.ನಲ್ಲಿ ನೆಲೆಗೊಂಡಿಲ್ಲ, ಹುವಾವೇ ಸೆಕ್ಯುರಿಟೀಸ್ ಎಕ್ಸ್ಚೇಂಜ್ ಕಮಿಷನ್‌ಗೆ ಫೈಲಿಂಗ್‌ಗಳನ್ನು ಸಲ್ಲಿಸುವ ಅಗತ್ಯವಿಲ್ಲ. ಹುವಾವೇ ಇದರ ಬಗ್ಗೆ ಹೇಳುವುದೇನೆಂದರೆ ಚೀನಾಪ್ರಜೆಯಲ್ಲದವರು ಶೇರ್ ಖರೀದಿಸಲು ಚೀನಾದ ಕಾನೂನು ಅಡ್ಡಿಯಾಗಿದೆ. ಹುವಾವೇ ಮೇಲೆ ಚೀನಾ ಸರ್ಕಾರದ ಯಾವುದೇ ಪ್ರಭಾವವಿಲ್ಲ ಎಂದು ಹುವಾವೇ ಸತತವಾಗಿ ಹೇಳಿದೆ. ಕಂಪನಿಯು ನೌಕರರ ಒಡೆತನದಲ್ಲಿ ನಿರ್ವಹಿಸಲ್ಪಡುತ್ತದೆ

ಹುವಾವೇ ನೌಕರರ ಸ್ಟಾಕ್ ಮಾಲೀಕತ್ವ ಕಾರ್ಯಕ್ರಮ (ಇಎಸ್‌ಒಪಿ) ಮೂಲಕ ಉದ್ಯಮ ಬೆಳೆಸಿದೆ.

ಹುವಾವೇ ಸ್ಥಾಪಿಸಿದ್ದು ರೆನ್‌ಜೆಂಗ್‌ಪೈ (Ren Zhengfei). ಕಂಪನಿ ಸ್ಥಾಪಿಸುವ ಮೊದಲು ಸೈನಿಕನಾಗಿ ಚೀನಾದ ಮಿಲಿಟರಿಯ ಎಂಜಿನಿಯರಿಂಗ್ ಸ್ಕಾರ್ಪ್ ಸದಸ್ಯರಾಗಿದ್ದರು, ಲಿಯಾವೊಯಾಂಗ್ರಾ ರಾಸಾಯನಿಕ ಫೈಬರ್ ಕಾರ್ಖಾನೆಯನ್ನು ಸ್ಥಾಪಿಸಿದರು ಮತ್ತು ಉಪನಿರ್ದೇಶಕರಾಗಿ ಬಡ್ತಿ ಪಡೆದರು. ವಿದೇಶದಲ್ಲಿ ಸಾಕಷ್ಟು ವಹಿವಾಟು ಹೊಂದಿರುವ ಹುವಾವೇ ಕಂಪನಿಯಲ್ಲಿ ಚೀನಾ ದೇಶದ ಪ್ರಜೆಯಲ್ಲದೆ ಯಾರು ಹೂಡಿಕೆ ಮಾಡಲಾಗುವುದಿಲ್ಲ.

ಕಳೆದ ವರ್ಷ ಕೆನಡಾದಲ್ಲಿ ಹುವಾವೇ ಸಂಸ್ಥೆಯ ಹಣಕಾಸು ಸಂಸ್ಥೆಯ ಮುಖ್ಯಸ್ಥರ ಬಂಧನವಾಯಿತು. ಮೆಂಗ್ವಾಂಜ್ಹೌ ಹಣಕಾಸು ವಿಭಾಗದ ಮುಖ್ಯಸ್ಥೆ. ಇವರು ಹುವಾವೇ ಸಂಸ್ಥೆಯ ಸ್ಥಾಪಕರಾದರೆ ರೆನ ಜೆಂಗ್‌ಫೈ ಮಗಳು. ಸದ್ಯ ಕೆನಡಾದಲ್ಲಿ ಮೊಕದ್ದಮೆ ಎದರಿಸುತ್ತಿರುವ ಇವರನ್ನು ಅಮೆರಿಕ ತನ್ನ ವಶಕ್ಕೆ ನೀಡಲು ಕೆನಡಾ ದೇಶಕ್ಕೆ ಮನವಿಮಾಡಿದೆ. ಇರಾನ್ ಮೇಲಿನ ಆರ್ಥಿಕ ನಿರ್ಬಂಧ ಸಮಯದಲ್ಲಿ ಹುವಾವೇ ಸಂಸ್ಥೆ ಬೇರೆ ಹೆಸರಿನಲ್ಲಿ ಅಲ್ಲಿ ನಡೆಸಿರುವ ವಹಿವಾಟಿನ ಬಗ್ಗೆ ಮೊಕದ್ದಮೆ ಎದರಿಸುತ್ತಿದೆ.

ಚೀನಾ ಮೇಲಿನ ದೊಡ್ಡ ಆರೋಪ ಅದು ತನ್ನ ನಾಗರಿಕರ ಮೇಲೆ ಮತ್ತು ಇತರ ದೇಶಗಳ ಮೇಲೆ ನಡೆಸುತ್ತಿರುವ ಗೂಢಚರ್ಯೆ. ಈ ಆರೋಪವನ್ನು ಅಮೆರಿಕದ ಗುಪ್ತಚರ ಇಲಾಖೆಯ ಮಾಜಿ
ಅಧಿಕಾರಿಗಳು ಬಹಳಷ್ಟು ಬಾರಿ ಮಾಡಿದ್ದಾರೆ. ಈ ಎಲ್ಲಾ ಅಂಶಗಳನ್ನು ಗಮನಿಸುತ್ತಿರುವ ಬಹಳ ದೇಶಗಳು ಹುವಾವೇ ಸಂಸ್ಥೆಯನ್ನು 5 ಜಿ ತಂತ್ರಜ್ಞಾನದಿಂದ ಹೊರಗಿಡಲು ಪ್ರಾರಂಭಿಸಿದ್ದಾರೆ. ಚೀನಾ ತಾನು ಮಾಡುತ್ತಿರುವ ವಾದದಂತೆ ಮುಚ್ಚಿಡಲು ಏನೂ ಇಲ್ಲ ಎಂಬುದಾದರೆ ಅದು ಮೊದಲನೆಯದಾಗಿ ತನ್ನ ನೀತಿ ಬದಲಿಸಿ ಹುವಾವೇ ಕಂಪನಿಯಲ್ಲಿ ಎಲ್ಲಾ ದೇಶದ ನಾಗರಿಕರು ಹೂಡಿಕೆಮಾಡಲು ಅನುಕೂಲ ಮಾಡಬೇಕು. ತನ್ನ ಪ್ರದೇಶದಲ್ಲಿ ಹೊರ ದೇಶದ ಪತ್ರಕರ್ತರು ಮುಕ್ತವಾಗಿ ಕೆಲಸಮಾಡಲು ಅನುಮತಿ ನೀಡಬೇಕು.

ತನ್ನ ದೇಶದ ಸಂಸ್ಥೆಗಳಲ್ಲಿ ಸರ್ಕಾರದ ಹಿಡಿತವನ್ನು ನಿಲ್ಲಿಸಬೇಕು. ಹುವಾವೇ ಕೂಡ ಈ ಮೇಲಿನ ಎಲ್ಲಾ ಆರೋಪಗಳನ್ನು ದೂರಮಾಡಲು ಸಂಸ್ಥೆಯ ಸ್ಥಾಪಕರ ವಿವರ, ನಿರ್ದೇಶಕರ ಆಯ್ಕೆಯ ನೀತಿ ಮತ್ತು ಅಮೆರಿಕದ ತನಿಖಾ ಸಮಿತಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ ಆರೋಪ ಮುಕ್ತಗೊಂಡರೆ ತನ್ನ ನೌಕರರಿಗೆ ಮತ್ತು ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಲಿದೆ.

5 ಜಿ ತಂತ್ರಜ್ಞಾನದಿಂದ ಇಂಟರ್ನೆಟ್ ವೇಗ, ಸಾಧನಗಳ ಪ್ರತಿಕ್ರಿಯೆ ಮತ್ತು ಬಹಳ ಸಾಧನಗಳನ್ನು ಒಂದೇ ಸಮಯದಲ್ಲಿ ಬಳಸುವುದಕ್ಕೆ ಸಹಕಾರಿಯಾಗಲಿದೆ.

5 ಜಿ ನಾವು ತಂತ್ರಜ್ಞಾನ ಬಳಸುವ ರೀತಿಯನ್ನು ಸಂಪೂರ್ಣವಾಗಿ ಬದಲಿಸಲಿದೆ. ಮುಂದಿನ ಡಿಜಿಟಲ್ ಇಂಡಿಯಾದ ಅವಶ್ಯಕತೆಗಳನ್ನು ಪೂರೈಸುವಲ್ಲಿ ದೊಡ್ಡ ಪಾತ್ರ ವಹಿಸಲಿದೆ. ಸಾಮಾನ್ಯ ನಾಗರಿಕನು ಬದುಕುವ ರೀತಿಯನ್ನು ಬದಲಾಯಿಸಲಿದೆ.

 

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management