Log in
  • ಮುಖಪುಟ
  • ನಕ್ಸಲರೆಂದರೆ ಅವರೇನು ರಕ್ಷಕರಲ್ಲ, ಕ್ರೂರ ರಾಕ್ಷಸರು !

ನಕ್ಸಲರೆಂದರೆ ಅವರೇನು ರಕ್ಷಕರಲ್ಲ, ಕ್ರೂರ ರಾಕ್ಷಸರು !

ಶಿವಾನಂದ 

ಮೇ 1ನೇ ತಾರೀಖು ಮಹಾರಾಷ್ಟ್ರ ಜನತೆಯೆಲ್ಲಾ ಸಂಸ್ಥಾಪನಾ ದಿನಾಚರಣೆ ಆಚರಿಸಿ ಸಂಭ್ರಮಿಸುತ್ತಿರುವ ಹೊತ್ತಿನಲ್ಲಿ ಕೆಂಪು ಉಗ್ರರು ಭದ್ರತಾಸಿಬ್ಬಂದಿಗಳ ಮೇಲೆ ದಾಳಿನಡೆಸಿ ಅಟ್ಟಹಾಸ ಮೆರೆದರು. ಹದಿನಾರು ಜನ ಭದ್ರತಾ ಕಮಾಂಡೋಗಳನ್ನು ಐಇಡಿ ಸ್ಫೋಟಿಸಿ ಅತ್ಯಂತ ಭೀಕರ ರಕ್ತಪಾತ ನಡೆಸಿದರು. ಒಂದು ಕಡೆ ಪುಲ್ವಾಮದಲ್ಲಿ ಹೊರಗಿನ ಭಯೋತ್ಪಾದಕರು ಕ್ರೌರ್ಯವನ್ನು ಮೆರೆದಿದ್ದರೆ ಈಗ ನಮ್ಮ ಮಧ್ಯೆ ಇರುವ ರಕ್ತಪಿಪಾಸು ನಕ್ಸಲರು ಭದ್ರತಾಪಡೆಗಳ ಮೇಲೆ ಕ್ರೌರ್ಯವನ್ನು ಮೆರೆದಿದ್ದಾರೆ. ದುಷ್ಕೃತ್ಯ ನಡೆಸಿದ ಮತಾಂಧ ಭಯೋತ್ಪಾದಕರನ್ನು ಕೆಲವೇ ದಿನಗಳಲ್ಲಿ ಅವರ ನಂಬುಗೆಯ 72 ಕನ್ಯೆಯರ ಬಳಿ ಕಳಿಸಿದಾಯಿತು. ಈಗ ಬಾಕಿಯಿರುವುದು ಮಾವೋ ತುಂಡುಗಳನ್ನು ಅವನ ಬಳಿ ಕಳಿಸುವುದು! ಶತಾಯಗತಾಯ ಈ ದೇಶವನ್ನು ಅದೋಗತಿಗೆ ತಳ್ಳಲು ಪಟ್ಟುಹಿಡಿದು ಶ್ರಮಿಸುತ್ತಿರುವವರೆಂದರೆ ನಕ್ಸಲೀಯರು. ನಕ್ಸಲ್ ಚಳುವಳಿ ಹುಟ್ಟಿನಿಂದಲೂ ದೇಶದ ಅಭಿವೃದ್ಧಿಯ ವಿರುದ್ಧವಾಗಿ ನಡೆಯುತ್ತಾ ಬಂದಿದೆ. ಸರ್ವರಿಗೂ ಸಮಪಾಲು, ಸಮಬಾಳು ಎಂದು ನಾಟಕವಾಡಿ ಸುಳ್ಳುಹೇಳುತ್ತಾ ಬಡವ-ಬಲ್ಲಿದ, ದೀನದಲಿತರ ದಾರಿತಪ್ಪಿಸಿ ರಕ್ತ ಕ್ರೌರ್ಯವನ್ನು ಬಿತ್ತನೆಮಾಡುತ್ತಾ ಸಾಗಿದೆ. ಯಾವ ಸಾಮಾನ್ಯನೂ ನೆಮ್ಮದಿಯಿಂದ ಸಂತಸದ ದಿನಗಳನ್ನು ಕಳೆಯದಂತೆ ಮಾಡುವುದೇ ಇದರ ಕೆಲಸ. ಕ್ರಾಂತಿಯಿಂದಲೇ ಸಮಾನತೆಯೆಂದು ಹುಸಿಸುಳ್ಳುಗಳನ್ನು ಪೋಣಿಸಿ ಸಂವಿಧಾನಬದ್ಧ ಸರ್ಕಾರವನ್ನು ದ್ವಂಸಮಾಡುವ ಯತ್ನ ನಡೆಸುತ್ತಾ ಬಂದಿದ್ದಾರೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಈ ದೇಶದ ಅಂತಃಸತ್ವವನ್ನು ಒಳಗಿನಿಂದಲೇ ಟೊಳ್ಳಾಗಿಸುವ ಹುನ್ನಾರವೇ ಈ ನಕ್ಷಲೀಯರ ಗುರಿ!

ಸಮಾಜವಾದ, ಮಾನವತಾವಾದದ ಬಗ್ಗೆ ಬೊಗಳೆಬಿಟ್ಟು ಮೊಸಳೆಕಣ್ಣೀರು ಸುರಿಸುವ ಇವರ ನಿಷ್ಠೆ ಏನಿದ್ದರೂ ಚೀನಾದ ಮೇಲೆ! ಈ ದೇಶದ ಸಂವಿಧಾನವನ್ನು ಗೌರವಿಸುತ್ತಾರೆಯೇ ಅದನ್ನು ಕೇಳಲೇಬೇಡಿ. ಶಸ್ತ್ರ ಹೊತ್ತುತಿರುಗುವುದಾಗಲಿ ಶಸ್ತ್ರ ಕ್ರಾಂತಿಯಾಗಲಿ ಮಾತುಕತೆಗಿದ್ದ ವಿಷಯವಲ್ಲ; ನಾವು ಅದರ ಜತೆಗೆ ರಾಜಿಯಾಗುವುದೇ ಇಲ್ಲ. ಈ ದೇಶದ ಸಂವಿಧಾನವನ್ನು ನಾವು ಒಪ್ಪುವುದಿಲ್ಲ. ನಮಗೆ ಚೀನಾದ ಮಾವೋಗಳ ಸಂಪರ್ಕ ಇದೆಯೆಂದು, ಚೀನಾದ ಅಧ್ಯಕ್ಷನೇ ನಮ್ಮ ಅಧ್ಯಕ್ಷನೆಂದು ಬಂದೂಕಿನ ಮೂಲಕವೇ ಅಧಿಕಾರ ಪಡೆಯುತ್ತೇವೆಂದು ಎನ್ನುವುದೆ ಈ ನಕ್ಷಲೀಯರ ವಾದ. ಯಾವಾಗಲೂ ಚೀನಾದ ಜಪದಲ್ಲಿ ಮುಳುಗಿರುತ್ತಾರೆ. ಚೀನಾದಲ್ಲಿ ಮಳೆಯಾದರೆ ಭಾರತದಲ್ಲಿ ಕೊಡೆ ಹಿಡಿಯುತ್ತಾರೆ.

ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಕ್ಸಲರು ಬಡವರ ಪರ ಹೋರಾಡುವವರು; ಸಾಮಾಜಿಕ ನ್ಯಾಯ ಕಾಪಾಡುವವರು. ನಕ್ಸಲಿಯರು ದೇಶಭಕ್ತರು. ನಕ್ಸಲಿಯರು ಜನಪರ ಕಾಳಜಿಯುಳ್ಳವರು. ನಕ್ಸಲರು ಮಾನವತಾವಾದಿಗಳು ಎಂದು ಜನರನ್ನು ನಂಬಿಸಲು ಬುರುಡೆ ಬಿಡುತ್ತಾರೆ. ನಿಜವಾಗಿಯೂ ಇವರು ಮಾಡಿದ ಬಡವರ ಉದ್ಧಾರವಾದರೂ ಎಷ್ಟು? 1967 ರಿಂದ ಆರಂಭವಾದ ಇವರ ರಕ್ತ ಕ್ರೌರ್ಯದ ಚಳುವಳಿಯಿಂದ ಇದುವರೆಗೂ ಒಂದೇ ಒಂದು ಊರು, ಒಂದೇ ಒಂದು ಮನೆಯನ್ನೂ ಉದ್ಧಾರ ಮಾಡಲಾಗಿಲ್ಲ. ಬದಲಾಗಿ ಉದ್ಧಾರಮಾಡುವ ನೆಪದಲ್ಲಿ ಅಮಾಯಕರ ಕೊಲೆ ಸುಲಿಗೆ ದರೋಡೆಯನ್ನು ಅತ್ಯಂತ ಧಾರಾಳವಾಗಿ ಮಾಡಲಾಗಿದೆ ಹೊರತು ತನ್ನ ಅಜೆಂಡಾದಲ್ಲಿರುವ ಯಾವುದೇ ಆಶಯಗಳನ್ನು ನಕ್ಸಲರಿಂದ ಮತ್ತು ಅವರ ರಕ್ತ ಕ್ರಾಂತಿಯಿಂದ ಈಡೇರಿಸಲು ಸಾಧ್ಯವಾಗಿಲ್ಲ. ಹೆದರಿಸಿ ಬೆದರಿಸಿ ದಬ್ಬಾಳಿಕೆಮಾಡಿ ಬೆವರು ಸುರಿಸಿ ದುಡಿಯುತ್ತಿರುವವರಿಂದ ಹಪ್ತಾ ವಸೂಲಿ ಮಾಡುತ್ತಾರೆ.

ಬಂಡವಾಳಶಾಹಿ, ಜಮೀನ್ದಾರರ ವಿರುದ್ಧವೇ ನಮ್ಮ ಹೋರಾಟವೆಂದು ನಯವಾಗಿ ಜನರ ದಾರಿತಪ್ಪಿಸುತ್ತಾರಲ್ಲ ಒಂದು ವೇಳೆ ಇವರ ಗುರಿಯಂತೆ ಬಂಡವಾಳಶಾಹಿ, ಜಮೀನ್ದಾರರನ್ನು ರಕ್ತಕ್ರಾಂತಿಯಿಂದ ನಾಶಮಾಡಿದರೆನ್ನಿ ಮುಂದೆ ಅಂತಿಮ ಗುರಿ ಏನು? ಅದರಲ್ಲೂ ಅವರಿಗೆ ಸ್ಪಷ್ಟತೆಯಿಲ್ಲ. ಅಮಾಯಕರನ್ನು ಸುಲಿಗೆ ಮಾಡುತ್ತಾರಲ್ಲ ನಕ್ಸಲಿಸಂ ಸಾಮಾಜಿಕನ್ಯಾಯ ಬಡವ-ಬಲ್ಲಿದ, ದಲಿತ-ದಮನಿತ, ಶೋಷಿತರ ಪರ ಹೋರಾಟದ ಬಣ್ಣದ ಮಾತಿನ ಹಿಂದೆ ಅಧಿಕಾರದ ಗದ್ದುಗೆ ಏರುವ ದಾಹ ಇದೆಯೇ ಹೊರತು ಅಭಿವೃದ್ಧಿಯ ಆಲೋಚನೆಯಂತೂ ಇಲ್ಲ. ಬಂದೂಕಿನ ಬಲದಿಂದ ರಾಜಾಧಿಕಾರದ ಗದ್ದುಗೆ ಏರುವುದೇ ನಮ್ಮ ಗುರಿ ವಿನಃ ಕೇವಲ ಗಿರಿಜನರು ಮತ್ತು ರೈತವರ್ಗದವರ ಕಣ್ಣಿರು ಒರೆಸುತ್ತಾ ಕೂರುವುದಕ್ಕಲ್ಲ ಎಂದು ನಕ್ಸಲಿಸಂ ಭಾರತದಲ್ಲಿ ಬೇರೂರಲು ಕಾರಣಕರ್ತನಾದ ಚಾರು ಮಜುಂದಾರನೆ ಹೇಳಿದ್ದಾನೆ.! ಸಾವಿರಾರು ವರ್ಷಗಳಿಂದ ಇರುವ ಕೆಲವೊಂದು ಕಟ್ಟಳೆಗಳನ್ನು ಕಳಚಿ ಇವರಿಂದ ಸುಧಾರಣೆ ಆಗುತ್ತದೆ ಎಂದರೆ ಅದಕ್ಕಿಂತಲೂ ಮೂರ್ಖತನ ಮತ್ತೊಂದಿರಲಾರದು. ಕೇವಲ ಇವರ ರಕ್ತಕ್ರಾಂತಿಯಿಂದಲೇ ಸಮಾಜದಲ್ಲಿ ಸಮಾನತೆ ಬಂದು ಸುಧಾರಣೆಯಾಗುತ್ತದೆ ಎಂದರೆ ಅದಕ್ಕಿಂತ ಮುಠ್ಠಾಳತನ ದೊಡ್ಡ ಮತ್ತೊಂದಿರಲಾರದು.

ನಕ್ಸಲಿಯರು ದೇಶಭಕ್ತರು. ನಕ್ಸಲಿಯರು ಜನಪರ ಕಾಳಜಿಯುಳ್ಳವರು. ನಕ್ಸಲರು ಮಾನವತಾವಾದಿಗಳು ಎಂದು ಜನರನ್ನು ನಂಬಿಸಲು ಬುರುಡೆ ಬಿಡುತ್ತಾರೆ. ನಿಜವಾಗಿಯೂ ಇವರು ಮಾಡಿದ ಬಡವರ ಉದ್ಧಾರವಾದರೂ ಎಷ್ಟು? 1967 ರಿಂದ ಆರಂಭವಾದ ಇವರ ರಕ್ತ ಕ್ರೌರ್ಯದ ಚಳುವಳಿಯಿಂದ ಇದುವರೆಗೂ ಒಂದೇ ಒಂದು ಊರು, ಒಂದೇ ಒಂದು ಮನೆಯನ್ನೂ ಉದ್ಧಾರ ಮಾಡಲಾಗಿಲ್ಲ. ಬದಲಾಗಿ ಉದ್ಧಾರಮಾಡುವ ನೆಪದಲ್ಲಿ ಅಮಾಯಕರ ಕೊಲೆ ಸುಲಿಗೆ ದರೋಡೆಯನ್ನು ಅತ್ಯಂತ ಧಾರಾಳವಾಗಿ ಮಾಡಲಾಗಿದೆ ಹೊರತು ತನ್ನ ಅಜೆಂಡಾದಲ್ಲಿರುವ ಯಾವುದೇ ಆಶಯಗಳನ್ನು ನಕ್ಸಲರಿಂದ ಮತ್ತು ಅವರ ರಕ್ತ ಕ್ರಾಂತಿಯಿಂದ ಈಡೇರಿಸಲು ಸಾಧ್ಯವಾಗಿಲ್ಲ.

ಸಮಾನತೆಮಂತ್ರ ಬೋಧಿಸುತ್ತಿರುವ ಈ ನಕ್ಷಲಿಯರದೇನು ಸಜ್ಜನ ಬದುಕೆ? ಜನರ ಉದ್ಧಾರಕ್ಕಾಗಿ ಕಾಡುಸೇರಿದ್ದೇವೆನ್ನುವವರದು ನಾಗರಿಕ ಜೀವನಶೈಲಿಯೇ? ಬಿಸಿರಕ್ತದ ಹುಮ್ಮಸ್ಸಿನಲ್ಲಿ ಸಮಾಜವನ್ನು ಕ್ರಾಂತಿಯಿಂದ ಒಂದೇ ಬಾರಿಗೆ ಸರಿಮಾಡುತ್ತೇವೆಂದು ನಕ್ಸಲ್ ಚಟುವಟಿಕೆಯಲ್ಲಿ ತೊಡಗಿರುವವರ ಬದುಕಿನ ಶೈಲಿಯನ್ನು ಊಹಿಸುವುದೆ ಬೇಡ. ಅವರೊಳಗಿನ ಅನೈತಿಕ ಚಟುವಟಿಕೆಗಳನ್ನು ನೇರವಾಗಿಯೇ ನೋಡುವುದಾದರೆ ಯಾವ ವ್ಯಭಿಚಾರಕ್ಕೂ ಕಡಿಮೆ ಇರುವುದಿಲ್ಲ. ಜಾರ್ಖಂಡ್‌ನಲ್ಲಿ ನಕ್ಸಲ್ ಅಡಗುತಾಣಗಳ ಮೇಲೆ ದಾಳಿನಡೆಸಿದಾಗ ಅಲ್ಲಿ ದೊರೆತಿರುವ ವಸ್ತುಗಳು ಬಗ್ಗೆ ಕೇಳಿದರೆ ಎಂತವರಾದರೂ ಒಂದು ಕ್ಷಣ ಕಿವಿಮುಚ್ಚದೇ ಇರಲಾರರು! ಗರ್ಭಪರೀಕ್ಷಿಸುವ ಕಿಟ್, ಗರ್ಭನಿರೋಧಕ ಮಾತ್ರೆ, ಕಾಂಡೋಮ್‌ಗಳು ಸಿಕ್ಕಿದ್ದವು. ಕರ್ನಾಟಕದ ಆಗುಂಬೆ ಬಳಿ ಬರ್ಕಣದ ತಾಣಗಳ ಮೇಲೆ ದಾಳಿನಡೆಸಿದಾಗಲೂ ಇಂತಹದೇ ವಸ್ತುಗಳು ಸಿಕ್ಕಿದ್ದವು. ಅಷ್ಟೇ ಯಾಕೆ ಸಿಂಗಸಾರ್ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ನಡೆಸಿದ ಸಂದರ್ಭದಲ್ಲಿ ಪೊಲೀಸರ ವಶಕ್ಕೆ ಸಿಕ್ಕ ಜಯಮ್ಮ ಎಂಬುವಳ ಪರಿಸ್ಥಿತಿ ಇನ್ನೂ ಗಂಭೀರ ಸ್ವರೂಪದ್ದಾಗಿತ್ತು. ಕಾಡಿನಿಂದ ಹೊರಬರುವ ಹೊತ್ತಿಗೆ ಅವಳು ನಾಲ್ಕು ತಿಂಗಳು ಗರ್ಭಿಣಿಯಾಗಿದ್ದಳು. ತನ್ನ ಮೇಲೆ ಯಾರೆಲ್ಲಾ ಅತ್ಯಾಚಾರ ನಡೆಸಿದರೆಂದು ಪೊಲೀಸರ ಬಳಿಯಿರುವ ಅವಳ ಡೈರಿಯೇ ಹೇಳುತ್ತದೆ. ನಕ್ಸಲ್‌ಸಾಮ್ರಾಜ್ಯದೊಳಗೆ ಲೈಂಗಿಕಬಯಕೆಗೆ ಅವಕಾಶ ಹೇಗೆ ಇದೆಯೋ ಹಾಗೆ ಅಲ್ಲಿ ಮುಕ್ತ ಲೈಂಗಿಕಕ್ರಿಯೆಯಲ್ಲಿ ಭಾಗವಹಿಸಿದ ಹೆಣ್ಣು ಗರ್ಭಧರಿಸುವಂತಿಲ್ಲ ಎಂಬುವುದು ಅಲ್ಲಿನ ಅಲಿಖಿತ ಕಾನೂನು. ಹಾಗೊಂದು ವೇಳೆ ಗರ್ಭಧರಿಸಿದ್ದೆಯಾದರೆ ಮರಣದಂಡನೆ ಖಚಿತವಂತೆ. ರಕ್ತಕ್ರಾಂತಿಯಿಂದಲೇ ಸಮಾನತೆ ತರುವ ಹುಂಬತನಕ್ಕೆ ಬಿದ್ದು ನಕ್ಸಲ್‌ಚಳುವಳಿ ಸೇರಿದ ಮೂವರು ಯುವತಿಯರು ನಿಯಮ ಮೀರಿ ಗರ್ಭ ಧರಿಸಿದ್ದರಿಂದ ಅವರ ಜೀವಕ್ಕೆ ಕುತ್ತು ಬಂದಿದ್ದನ್ನು ಹಿಂದೊಮ್ಮೆ ಇಂಡಿಯನ್ ಎಕ್ಸಪ್ರೆಸ್ ವರದಿಮಾಡಿತ್ತು.

ದೇಶದ ಅಭಿವೃದ್ಧಿಯ ಎಲ್ಲಾ ಯೋಜನೆಗಳಿಗೆ ಅಡ್ಡಿಪಡಿಸುವುದೆ ಮೊದಲ ಇವರ ಕೆಲಸ. ಸಂವಿಧಾನ ವಿರೋಧಿಕೃತ್ಯಗಳನ್ನೆ ನಕ್ಸಲೀಯರು ಬೆಂಬಲಿಸುತ್ತಿರುವುದು. ಪ್ರಜೆಗಳೆ ತಮ್ಮ ಪ್ರತಿನಿಧಿಗಳನ್ನು ಆರಿಸುವ ಹೊತ್ತಿನಲ್ಲಿ ಚುನಾವಣೆಗಳು ನಡೆಯದಂತೆ ಬಹಿಷ್ಕರಿಸುವುದು. ದೇಶದಲ್ಲಿ ಆಂತರಿಕ ಶಾಂತಿ ಸುವ್ಯವಸ್ಥೆ ಕಾಪಾಡುವ ಪೊಲೀಸರನ್ನು ಬಾಂಬ್‌ಸ್ಫೋಟಿಸಿ ಭೀಕರವಾಗಿ ಹತ್ಯೆಗೈಯುವುದು. ಜೀವದ ಹಂಗುತೊರೆದು ದೇಶವನ್ನು ರಕ್ಷಿಸುತ್ತಿರುವ ಸೈನಿಕರನ್ನು ಕಗ್ಗೊಲೆಮಾಡುವುದು. ಭದ್ರತಾಸಿಬ್ಬಂದಿಗಳ ಬಸ್ಸಿಗೆ ನೆಲಬಾಂಬ್ ಇಟ್ಟು ಸ್ಫೋಟಿಸುವುದು, ಬೆಂಕಿಹಚ್ಚಿ ಅಶಾಂತಿಯನ್ನು ಹರಡುವುದು. ಅಮಾಯಕರು ಬೆವರು ಹರಿಸಿ ದುಡಿದು ಭದ್ರತಾದೃಷ್ಟಿಯಿಂದ ಬ್ಯಾಂಕ್‌ನಲ್ಲಿಟ್ಟಿರುವ ಹಣವನ್ನು ದರೋಡೆಮಾಡುವುದು. ಅರಣ್ಯಪ್ರದೇಶದ ಸುತ್ತಮುತ್ತ ಇರುವ ಜನರಿಗೆ ಒಂದಲ್ಲಾ ಒಂದು ರೀತಿಯಲ್ಲಿ ಹಿಂಸೆನೀಡುವುದು ನಕ್ಸಲೀಯರು ಮಾಡುವ ಕೆಲಸಗಳು. ಇದು ಸಮಾಜದಲ್ಲಿ ಸಮಾನತೆ ತರುವವರ ಅಮಾನವೀಯ ಜೀವನಪದ್ಧತಿ. ದೇಶದ ಹೊರಗಿನ ದುಷ್ಟಶಕ್ತಿಗಳನ್ನು ಸರ್ಜಿಕಲ್ ದಾಳಿಗಳನ್ನುಮಾಡಿ ಬುದ್ಧಿ ಕಲಿಸಬಹುದು ಆದರೆ ಒಳಗಿನ ದುಷ್ಟಶಕ್ತಿಗಳನ್ನು ನೋಡಿಯೂ ಸುಮ್ಮನಿರಬೇಕಾದ ಪರಿಸ್ಥಿತಿ ಎದುರಾಗಿದೆ.

This forum is empty.


Copyright © 2019-20 Vikrama. All rights reserved. 

Powered by Wild Apricot. Try our all-in-one platform for easy membership management