ವಿಕ್ರಮದ ವೆಬ್ಸೈಟ್ ಮತ್ತು ಫೇಸ್ಬುಕ್ ಪೇಜ್ ತೆರೆಯಲಾಗಿದೆ. ವೆಬ್ಸೈಟ್ನಲ್ಲಿ ಈಗಾಗಲೇ ಪ್ರತಿವಾರದ ಸಂಚಿಕೆಯ ಪಿಡಿಎಫ್ ಮತ್ತು ಲೇಖನಗಳನ್ನು ಪ್ರಕಟಿಸಲಾಗುತ್ತಿತ್ತು ಮತ್ತು ಅದಕ್ಕೆ 500 ರೂ.ಗಳ ವಾರ್ಷಿಕ ಚಂದಾ ನಿಗದಿ ಮಾಡಲಾಗಿತ್ತು. ಆದರೆ ಇನ್ನುಮುಂದೆ ವಿಕ್ರಮ ವೆಬ್ಸೈಟ್ನಲ್ಲಿ ಲೇಖನಗಳನ್ನು ಓದಲು ಯಾವುದೇ ಹಣ ನೀಡಬೇಕಾಗಿಲ್ಲ ಎಂಬುದನ್ನು ತಿಳಿಸಲು ಹರ್ಷಿಸುತ್ತೇವೆ. ಪತ್ರಿಕೆಯಲ್ಲಿ ಮುದ್ರಿತವಾದ ಲೇಖನಗಳು ಮಾತ್ರವಲ್ಲದೆ, ಪ್ರತಿದಿನದ ಸುದ್ದಿಗಳನ್ನೂ ವೆಬ್ಸೈಟ್ನಲ್ಲಿ ನೀಡಲಾಗುತ್ತದೆ.
ರಿಯಲ್ಟೈಮ್ ರಾಷ್ಟ್ರೀಯ ಸುದ್ದಿಗಳನ್ನು ವಿಕ್ರಮದ ಓದುಗರು ವಿಕ್ರಮ ವೆವ್ಸೈಟ್ನಲ್ಲಿ ಓದಬಹುದು. ಅಷ್ಟೇ ಅಲ್ಲದೆ ಈಗಾಗಲೇ ತೆರೆಯಲಾಗಿರುವ ವಿಕ್ರಮ ಫೇಸ್ಬುಕ್ ಪೇಜಿನಲ್ಲಿಯೂ ಸಹ ರಿಯಲ್ ಟೈಮ್ ಸುದ್ದಿಗಳನ್ನು ಹಾಕಲಾಗುವುದು. ಇದರೊಂದಿಗೇ, ಪೋಸ್ಟರ್, ವೀಡಿಯೋ ಸಾಮಗ್ರಿಗಳನ್ನೂ ವಿಕ್ರಮ ಲೋಗೋ ಅಡಿಯಲ್ಲಿ ತಯಾರಿಸಲಾಗುವುದು.
ಗುರುಪೂರ್ಣಿಮೆಯ ಈ ಸಂದರ್ಭದಲ್ಲಿ ವಿಕ್ರಮ ಪತ್ರಿಕೆಯ ವಿನ್ಯಾಸದಲ್ಲೂ ಕೊಂಚ ಬದಲಾವಣೆ ಮಾಡಲಾಗಿದೆ. ಏಕತಾನತೆಯನ್ನು ತೊಡೆದು ಹಾಕುವ ಉದ್ದೇಶ ಮತ್ತು ವಿಭಿನ್ನತೆ ತರುವ ಇಚ್ಛೆ ಇದರ ಹಿಂದಿದೆ. ವಿನ್ಯಾಸದ ಬದಲಾವಣೆ ಓದುಗರಿಗೆ ಇಷ್ಟವಾಗುತ್ತದೆ ಎಂದು ಭಾವಿಸಿದ್ದೇವೆ. ಒಂದುವೇಳೆ ಬೇರೆ ಸಲಹೆಗಳು ತಮ್ಮ ಬಳಿಯಿದ್ದರೆ ಪತ್ರ/ಫೋನ್/ಇ-ಮೇಲ್ ಮೂಲಕ ನಮಗೆ ತಿಳಿಸಬಹುದು.
ಹಿಂದಿನ ಧ್ಯೇಯ ಮತ್ತು ಹೊಸ ಉತ್ಸಾಹದೊಂದಿಗೆ ನವ ಸಂಪುಟವನ್ನು ಸ್ವಾಗತಿಸೋಣ.